ಚರಂಡಿಯಲ್ಲಿ ಸಿಕ್ತು ಲಕ್ಷಾಂತರ ಮೌಲ್ಯದ ಸಾರಾಯಿ

ಅಕ್ರಮ ಸಾರಾಯಿ
Advertisement

ಬಾಗಲಕೋಟೆ: ಚರಂಡಿಯಲ್ಲಿ ಬೆಲೆಬಾಳುವ ಬ್ರ್ಯಾಂಡಿ ಬಾಟಲಿಗಳನ್ನು ಬಚ್ಚಿಟ್ಟು ಅದರ ಮೇಲೆ ಬೇವಿನ ತಪ್ಪಲು ಹೊದಿಸಿ ಚುನಾವಣೆಯಲ್ಲಿ ಅಕ್ರಮ ಬಳಕೆಗೆ ನಡೆದಿದ್ದ ಪ್ರಯತ್ನವೊಂದನ್ನು ಬೆಳಕಿಗೆ ತಂದಿರುವ ಜಾಗೃತ ದಳ ಸುಮಾರು ೫.೭೫ ಲಕ್ಷ ರೂ. ಮೌಲ್ಯದ ಸಾರಾಯಿ ಬಾಟಲಿಗಳನ್ನು ವಶಪಡಿಸಿಕೊಂಡಿದೆ.
ಸುಮಾರು ೬೦ ಪೆಟ್ಟಿಗೆಯಲ್ಲಿ ೫.೩೭೫ ಲಕ್ಷ ರೂ. ಮೌಲ್ಯದ ತಲಾ ೪೮ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಲ್ಲಿಂದ ತರಲಾಗಿದೆ ಎಂಬುದನ್ನು ಮರೆಮಾಚಲು ಬಾಟಲಿ ಮೇಲಿನ ಬ್ಯಾಚ್‌ಗಳನ್ನು ತೆಗೆದು ಹಾಕಲಾಗಿದೆ. ತನಿಖೆ ನಡೆದಿದ್ದು ಇದು ಚುನಾವಣೆಯ ಅಕ್ರಮ ಬಳಕೆಗೆ ಕಾಯ್ದಿಟ್ಟ ಸಂಗ್ರಹ ಎಂದು ಖಚಿತವಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.