ಸ್ಯಾಂಡಲ್‌ವುಡ್‌ಗೆ ತ್ರಿವಿಕ್ರಮ ಚಿತ್ರದ ಮೂಲಕ ಕಾಲಿಟ್ಟಿದ್ದ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ವಿಕ್ರಮ್ ಮತ್ತೊಂದು ಸಿನಿಮಾದಲ್ಲಿ ನಾಯಕ ನಟನಾಗಿ ನಟಿಸಲಿದ್ದಾರೆ.
ಹೆಡ್ ಬುಷ್ ಸಿನಿಮಾದಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿರುವ ಕಾರ್ತಿಕ್ ರಾಜನ್ ನಿರ್ದೇಶಿಸುತ್ತಿರುವ ಗ್ಯಾಂಗ್ ಸ್ಟಾರ್ ಕಥಾ ಹಂದರವನ್ನೊಳಗೊಂಡ ಸಿನಿಮಾದಲ್ಲಿ ನಟಿಸಲು ವಿಕ್ರಮ್ ಗ್ರೀನ್ ಸಿಗ್ನಲ್ ನೀಡಿದ್ದು, ಚಿತ್ರದ ಮುಹೂರ್ತ ನೆರವೇರಿದೆ.

ತಮಿಳು, ತೆಲುಗು ಚಿತ್ರರಂಗದಲ್ಲಿ ಸಹ ನಿರ್ದೇಶಕನಾಗಿ, ಸಿನಿಮಾ ಬರಹಗಾರನಾಗಿ ಗುರುತಿಸಿಕೊಂಡಿರುವ ಕಾರ್ತಿಕ್ ರಾಜನ್ ನಿರ್ದೇಶನದ ಮೊದಲ ಸಿನಿಮಾ ಇದಾಗಿದೆ. ಎರಡನೇ ಸಿನಿಮಾದಲ್ಲಿ ಮಾಸ್ ಹೀರೋ ಆಗಿ ವಿಕ್ರಮ್ ತೆರೆ ಮೇಲೆ ಮಿಂಚಲು ಸಕಲ ರೀತಿಯಲ್ಲೂ ಸಜ್ಜಾಗುತ್ತಿದ್ದಾರೆ. ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು ಸದ್ಯದಲ್ಲೇ ಟೈಟಲ್, ತಾರಾಬಳಗ, ತಂತ್ರಜ್ಞರು ಹಾಗೂ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳುವುದಾಗಿ ನಿರ್ದೇಶಕ ಕಾರ್ತಿಕ್ ರಾಜನ್ ತಿಳಿಸಿದ್ದಾರೆ.

ಜನವರಿಯಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಎಸ್.ತಮನ್ ಜೊತೆ ಕೆಲಸ ಮಾಡಿ ಅನುಭವ ಇರುವ ಯುವರಾಜ್ ಚಿತ್ರಕ್ಕೆ ಸಂಗೀತ ನಿರ್ದೇಶನ ನೀಡುತ್ತಿದ್ದಾರೆ.