ಗೋವಾದಲ್ಲಿ ಹುಲಿ ಸಂಖ್ಯೆ ಇಳಿಮುಖ

tiger
Advertisement

ಪಣಜಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರವಷ್ಟೇ ದೇಶದಲ್ಲಿ ಹುಲಿ ಗಣತಿಯನ್ನು ಘೋಷಿಸಿದ್ದಾರೆ. 2022ರ ಹುಲಿ ಗಣತಿ ವರದಿಯ ಪ್ರಕಾರ, ಭಾರತದಲ್ಲಿ ಹುಲಿಗಳ ಸಂಖ್ಯೆ 3,167ಕ್ಕೆ ಏರಿದೆ. ಹುಲಿಗಳ ಸಂಖ್ಯೆಯಲ್ಲಿ ದೇಶದಲ್ಲಿ ಪರಿಸ್ಥಿತಿ ಉತ್ತಮವಾಗಿದ್ದರೂ ಗೋವಾದಲ್ಲಿ ಹುಲಿಗಳ ಸಂಖ್ಯೆ ಇಳಿಮುಖವಾಗಿದೆ. ಗೋವಾದ ಮಹದಾಯಿ ಮತ್ತು ಮೋಲೆಮ್ ಅಭಯಾರಣ್ಯಗಳಲ್ಲಿ ಹುಲಿಗಳ ಸಂಖ್ಯೆ ಇಳಿಮುಖವಾಗಿದೆ.
ಪಶ್ಚಿಮ ಘಟ್ಟದಲ್ಲಿ 2018ರಲ್ಲಿ ಹುಲಿಗಳ ಸಂಖ್ಯೆ 981 ಇತ್ತು, ಆದರೆ 2022ರಲ್ಲಿ ಇದು 824ಕ್ಕೆ ಇಳಿಕೆಯಾಗಿದೆ. ರಾಜ್ಯಾದ್ಯಂತ ಯಾವುದೇ ಅಂಕಿಅಂಶಗಳು ಇನ್ನೂ ಬಿಡುಗಡೆಯಾಗದಿದ್ದರೂ, ಗೋವಾ-ಕರ್ನಾಟಕ ಗಡಿಭಾಗದ ಪಶ್ಚಿಮ ಘಟ್ಟಗಳಲ್ಲಿ ಹುಲಿಗಳ ಸಂಖ್ಯೆ ಇನ್ನಷ್ಟು ಇಳಿಮುಖವಾಗಿರುವುದು ತಿಳಿದುಬಂದಿದೆ.