ಬೆಳಗಾವಿ: ೨ಎ ಮೀಸಲಾತಿಗೆ ಒತ್ತಾಯಿಸಿ ಪಂಚಮಸಾಲಿ ಸಮಾವೇಶ ಗೋಕಾಕದಲ್ಲಿಂದು ನಡೆಯುತ್ತಿದೆ.
ರಮೇಶ ಜಾರಕಿಹೊಳಿ ಯವರ ಭದ್ರ ಕೋಟೆ ಎನಿಸಿದ್ದ ಗೋಕಾಕದಲ್ಲಿ ಈ ಸಮಾವೇಶ ನಡೆಯುತ್ತಿರುವುದು ವಿಶೇಷವಾಗಿದೆ.
ಮೇಲಾಗಿ ಸತೀಶ ಜಾರಕಿಹೊಳಿ ಹಿಂದೂ ಬಗ್ಗೆ ಆಡಿದ ಮಾತಿನ ಕಾವು ಇನ್ನೂ ಆರಿಲ್ಲ.
ಈ ಎಲ್ಲದರ ನಡುವೆ ಗೋಕಾಕದ ಮಹಿಳೆಯೊಬ್ಬಳು ಸತೀಶ ಸಾಹುಕಾರರ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ವೇದಿಕೆಗೆ ನುಗ್ಗುವುದಾಗಿ ಎಚ್ಚರಿಕೆ ನೀಡಿದ್ದು ವಾತಾವರಣ ಕಾವೇರುವಂತೆ ಮಾಡಿದೆ.
ಅಷ್ಟೇ ಅಲ್ಲ ಬಸನಗೌಡ ಪಾಟೀಲ ಯತ್ನಾಳರಿಗೆ ಆ ಮಹಿಳೆ ನೇರವಾಗಿ ಚಾಲೆಂಜ್ ಕೂಡ ಮಾಡಿದ್ದಾಳೆ.
ಈ ಹಿನ್ನೆಲೆಯಲ್ಲಿ ಬೆಳಗಾವಿ ಎಸ್ಪಿ ಡಾ. ಸಂಜೀವ ಪಾಟೀಲರು ಗೋಕಾಕದಲ್ಲಿಯೇ ಬೀಡು ಬಿಟ್ಟಿದ್ದಾರೆ.
ಪಂಚಮಸಾಲಿ ಹೋರಾಟಗಾರರು ಬಿಜೆಪಿ ಕ್ಷೇತ್ರವನ್ನೇ ಗುರಿಯಾಗಿಟ್ಟುಕೊಂಡು ಸಭೆಗಳನ್ನು ಮಾಡುತ್ತಿದ್ದಾರೆ ಎನ್ನುವುದು ಕಂಡು ಬರುತ್ತಿದೆ.
ಈಗಾಗಲೇ ರಾಮದುರ್ಗ, ಗೋಕಾಕ ತಾಲೂಕಿನ ಕಲ್ಲೊಳ್ಳಿ ಹುಕ್ಕೇರಿಯಲ್ಲಿ ಸಭೆಗಳನ್ನು ಮಾಡಿದ್ದರು.
ಈ ಹೋರಾಟಗಾರರು ಎಲ್ಲ ಕಡೆಗೆ ಜಾರಕಿಹೊಳಿ ಮತ್ತು ಕತ್ತಿ ಕುಟುಂವನ್ನು ಗುರಿಯಾಗಿಟ್ಟುಕೊಂಡು ಮಾತನಾಡಿದ್ದರು. ಇವತ್ತು ಗೊಕಾಕದಲ್ಲಿ ನಡೆಯುವ ಸಮಾವೇಶದಲ್ಲಿ ಹೋರಾಟಗಾರರು ಯಾರನ್ನು ಟಾರ್ಗೆಟ್ ಮಾಡುತ್ತಾರೆ ಎನ್ನುವುದನ್ನು ಕಾದು, ನೋಡಬೇಕು.