ಕುಷ್ಟಗಿ: ಪಟ್ಟಣದ ಕನಕದಾಸ ವೃತ್ತದಲ್ಲಿ ಗೂಡಂಗಡಿಯನ್ನು ಪುರಸಭೆ ಸಿಬ್ಬಂದಿ ಏಕಾಏಕಿ ತೆರವು ಗೊಳಿಸಿದ್ದಾರೆ ಎಂದು ಓರ್ವ ಮಹಿಳೆ ವಿಷದ ಬಾಟಲಿ ಹಿಡಿದುಕೊಂಡು ಗೊಂದಲ ಸೃಷ್ಟಿ ಮಾಡಿದ್ದು ಕಂಡು ಬಂತು.
ಕುಷ್ಟಗಿಯ ಕನಕದಾಸ ವೃತ್ತದ ಬಳಿ ಹಾಲುಮತ ಸಮುದಾಯದ ವತಿಯಿಂದ ಕನಕದಾಸ ಮೂರ್ತಿಯನ್ನು ಸ್ಥಾಪನೆ ಮಾಡುವ ಅಕ್ಕ ಪಕ್ಕದ ಜಾಗದಲ್ಲಿ ಇರುವಂತಹ ಡಬ್ಬಾ ಅಂಗಡಿಗಳನ್ನು ಪುರಸಭೆ ಸಿಬ್ಬಂದಿ ಜೆಸಿಬಿಯ ಮೂಲಕ ತೆರವುಗೊಳಿಸಿದರು. ಈ ಜಾಗದಲ್ಲಿ ಲಕ್ಷ್ಮೀ ತನ್ನ ಡಬ್ಬಾ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಳು. ಆದರೆ ಪುರಸಭೆಯವರು ಏಕಾಏಕಿಯಾಗಿ ಮಹಿಳೆಯ ಅಂಗಡಿಯನ್ನು ತೆರವುಗೊಳಿಸಿರುವುದರಿಂದ ಸಿಟ್ಟಿಗೆದ್ದ ಲಕ್ಷ್ಮವ್ವ ವಿಷದ ಬಾಟಲಿಯನ್ನು ಹಿಡಿದುಕೊಂಡು ಪುರಸಭೆ ಅಧ್ಯಕ್ಷ ಗಂಗಾಧರಯ್ಯ ಹಿರೇಮಠ ಹಾಗೂ ಸಿಬ್ಬಂದಿ ವಿರುದ್ಧ ಪ್ರತಿಭಟನೆ ನಡೆಸಿದ್ದಾಳೆ.