ಮಂಡ್ಯ: ಗುತ್ತಿಗೆದಾರರೊಬ್ಬರ ಮನೆಯೊಂದರ ಮೇಲೆ ದಾಳಿ ಮಾಡಿರುವ ಚುನಾವಣೆ ಅಧಿಕಾರಿಗಳು ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 11 ಲಕ್ಷ ಹಣವನ್ನು ವಶಪಡಿಸಿಕೊಂಡಿರುವ ಘಟನೆ ವರದಿಯಾಗಿದೆ.
ಹಲಗೂರು ತಾಲೂಕಿನ ತೊರೆ ಕಾಡನಹಳ್ಳಿ ಬಳಿ ಗುತ್ತಿಗೆದಾರ ಗೋಪಾಲ್ ಎಂಬುವರ ಮನೆಯ ಮೇಲೆ ರಾತ್ರಿ 10ಗಂಟೆ ಸುಮಾರಿಗೆ ದಾಳಿ ನಡೆಸಿರುವ ಸೆಕ್ಟರ್ ಚುನಾವಣೆ ಅಧಿಕಾರಿ ಮಂಜುನಾಥ್ ನೇತೃತ್ವದ ಅಧಿಕಾರಿಗಳ ತಂಡ ಈ ದಾಳಿ ನಡೆಸಿ ಹಣವನ್ನು ಹೊಸ ಪಡಿಸಿಕೊಂಡಿದ್ದಾರೆ.
ವ್ಯಕ್ತಿ ಒಬ್ಬ ತಮಗೆ ನೀಡಿದ ದೂರನ್ನು ಆಧರಿಸಿ ಈ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡು ಈ ದಾಳಿ ನಡೆಸಲಾಗಿದ್ದು, ಒಟ್ಟು 11,76,000 ಹಣವನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಹಣಕ್ಕೆ ಸಂಬಂಧಿಸಿದ ಸೂಕ್ತ ದಾಖಲೆ ಒದಗಿಸುವಂತೆ ಮನೆಯ ಮಾಲೀಕರಿಗೆ ತಿಳಿಸಲಾಗಿದೆ ಎಂದು ಸಹಾಯಕ ಚುನಾವಣಾ ಅಧಿಕಾರಿಗಳು ಆದ ತಹಶೀಲ್ದಾರ್ ಲೋಕೇಶ್ ತಿಳಿಸಿದ್ದಾರೆ.