ಗಾಂಧೀಜಿ ಕೂಡಾ ಮಹಾ ಪುಂಡಾಟಿಕೆ ವಿರೋಧಿಸಿದ್ದರು-ಕಾರಜೋಳ

Advertisement

ಬಾಗಲಕೋಟೆ: ಮಹಾರಾಷ್ಟ್ರ ಗಡಿ ವಿವಾದ 1912ರಿಂದಲೇ ಇದೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಬೆಳಗಾವಿ ಮಹಾರಾಷ್ಟ್ರ ಗಡಿ ವಿವಾದ 1912 ರಿಂದಲೇ ಇದೆ. ಅಲ್ಲದೇ 1922 ರಲ್ಲೂ ಈ ಬಗ್ಗೆ ಸಮಸ್ಯೆಯಾಗಿತ್ತು. 1924 ರಲ್ಲಿ ಮಹಾತ್ಮ ಗಾಂಧೀಜಿ ಅವರ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್‌ ಅಧಿವೇಶನ ನಡೆದಿತ್ತು. ಆಗ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಕೆಲ ಪುಂಡರು ಒತ್ತಾಯ ಮಾಡಿದ್ದರು. ಗಾಂಧೀಜಿಯವರು ಕೂಡಾ ಇದಕ್ಕೆ ಒಪ್ಪಿರಲಿಲ್ಲ. ಅಲ್ಲದೇ ಗಡಿ ವಿಚಾರಕ್ಕೆ ಸಂಬಂಧಿಸಿ 13 ಸಮಿತಿಗಳಿವೆ. ಅವೆಲ್ಲವೂ ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು ಅಂತಾನೇ ಹೇಳಿದೆ. ಕನಿಷ್ಠ ಜ್ಞಾನ ಇಲ್ಲದವರು ಇಂತಹ ಮಾತುಗಳನ್ನು ಆಡುತ್ತಾರೆ ಎಂದು ಕಾರಜೋಳ ಆಕ್ರೋಶ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳು ಕಮ್ಮಿ ಇದಾವೆ. ಆ ಬಗ್ಗೆ ಚರ್ಚೆ ಆಗಬೇಕು. ಅಲ್ಲದೇ ಮಹದಾಯಿ ಯೋಜನೆ ಬಗ್ಗೆಯೂ ಚರ್ಚೆ ಆಗಬೇಕಿದೆ. ಆದರೆ ಇದಕ್ಕೆಲ್ಲ ಪರಿಹಾರವಾಗಿ ಜನರು ಪ್ರತಿಭಟನೆ ಮಾಡುತ್ತಿದ್ದಾರೆ. ಸುವರ್ಣ ಸೌಧದ ಮುಂದೆ ಅಡ್ಡ ಹಾಕಿ ಕೂತ್ರೆ ಏನೂ ಪ್ರಯೋಜನ ಆಗಲ್ಲ ಎಂದರು.