ಗಾಂಜಾ ಮಾರಾಟ ನಾಲ್ವರ ಬಂಧನ

ಗಾಂಜಾ
Advertisement

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಸಿಸಿಬಿ ಘಟಕದ ಮಾದಕ ದ್ರವ್ಯ ಮತ್ತು ಮಹಿಳಾ ಸಂರಕ್ಷಣಾ ವಿಭಾಗ ದಾಳಿ ಮಾಡಿ ಧಾರವಾಡದ ರಜತಗಿರಿ ಗಾರ್ಡನ್ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿದೆ.
೬೨ ಪ್ಲ್ಯಾಸ್ಟಿಕ್ ಪ್ಯಾಕೆಟ್‌ಗಳಲ್ಲಿದ್ದ ೩೧೦ ಗ್ರಾಂ ಗಾಂಜಾ, ೨ ಬೈಕ್, ಮೊಬೈಲ್ ಹಾಗೂ ನಗದು ಸೇರಿ ಒಟ್ಟು ೧,೭೫,೧೭೦ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದೆ. ಪೊಲೀಸ್ ಇನ್‌ಸ್ಪೆಕ್ಟರ್ ಗೋಪಾಲ ರಾಠೋಡ ನೇತೃತ್ವದ ತಂಡ ದಾಳಿ ನಡೆಸಿದ್ದು, ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.