ಗದಗ: ಜಿಲ್ಲೆಯಾದ್ಯಂತ ಒಳಚರಂಡಿ ಯೋಜನೆಯನ್ನು ವಿಸ್ತರಣೆ, ಜಲಮೂಲಗಳ ಪುನಶ್ಚೇತನಕ್ಕೆ ಸರಕಾರ 30 ಕೋಟಿ ರೂ.ಗಳ ಯೋಜನೆ ರೂಪಿಸಿದೆ ಎಂದು ಕಾನೂನು ಸಚಿವ ಡಾ.ಎಚ್.ಕೆ.ಪಾಟೀಲ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳಾಗಿದೆ. ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ಒಳಚರಂಡಿ ವ್ಯವಸ್ಥೆಯಿಲ್ಲ. ಈ ಕೊರತೆ ನೀಗಿಸಲು ಜಿಲ್ಲೆಯ ಯುಜಿಡಿ ಕಾಮಗಾರಿ ವಿಸ್ತರಣೆಗಾಗಿ ೩೦ ಕೋಟಿ ಅನುದಾನ ಹಾಗೂ ಜಲಮೂಲ ಪುನಶ್ಚೇತನ, ಉದ್ಯಾನವನ, ಹಸರಿಕರಣಕ್ಕಾಗಿ ೩೦ ಕೋಟಿ ರೂ.ಗಳ ಅನುದಾನ ಮಂಜೂರಾಗಿದೆ. ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭವಾಗಲಿದೆ ಎಂದು ತಿಳಿಸಿದರು.