ಗಣೇಶ ವಿಸರ್ಜನೆ ವೇಳೆ ಕಾಲು ಜಾರಿ ವಿದ್ಯಾರ್ಥಿ ಸಾವು

ಗಣೇಶ ವಿಸರ್ಜನೆ
Advertisement

ತುಮಕೂರು: ಭೀಮಸಂದ್ರದ ಶಾಲೆಯಲ್ಲಿಟ್ಟಿದ್ದ ಗಣೇಶಮೂರ್ತಿಯನ್ನು ಬೆಳ್ಳಾವಿ ಹೋಬಳಿ ಮುದಿಗೆರೆ ಗ್ರಾಮದ ಹರಿಯುವ ಹಳ್ಳದ ನೀರಿನಲ್ಲಿ ವಿಸರ್ಜನೆ ಮಾಡಲು ಹೋದಾಗ ಕಾಲು ಜಾರಿ ನೀರಿನಲ್ಲಿ ಬಿದ್ದ ವಿದ್ಯಾರ್ಥಿ ಚೇತನ್ ಎಂಬಾತ ಸಾವನ್ನಪ್ಪಿದ ಘಟನೆ ನಡೆದಿದೆ.
ಸ್ಥಳದಲ್ಲಿಯೇ ಇದ್ದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಂಜುನಾಥ್ ಮತ್ತು ಮುದಿಗೆರೆ ಗ್ರಾಮದ ಇತರರು ಆತನನ್ನು ಮೇಲಕ್ಕೆ ತಂದು ಬದುಕಿಸುವ ಬಗ್ಗೆ ಪ್ರಯತ್ನಿಸಿ ಅಲ್ಲಿಂದ ಕೂಡಲೇ ಸಂಸ್ಥೆಯ ಬಸ್‌ನಲ್ಲಿ ಸಿದ್ದಾರ್ಥ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಗೆ ಕರೆತಂದಿರುತ್ತಾರೆ. ಚೇತನ್‌ನನ್ನು ಪರೀಕ್ಷಿಸಿ ವೈದ್ಯರು ಮೃತಪಟ್ಟ ಬಗ್ಗೆ ದೃಢಪಡಿಸಿರುತ್ತಾರೆ.