ಬೆಳಗಾವಿ: 25 ಗಂಟೆಗಳ ಮೆರವಣಿಗೆ ಬಳಿಕ ಶನಿವಾರ ಸಂಜೆ 5.20ಕ್ಕೆ ಬೆಳಗಾವಿಯಲ್ಲಿ ಗಣೇಶ ಮೂರ್ತಿಗೆ ಭಾವನಾತ್ಮಕ ವಿದಾಯ ಹೇಳಲಾಯಿತು. ಅಚ್ಚುಕಟ್ಟಾಗಿ ಶಾಂತಿಯುತವಾಗಿ ಗಣೇಶೋತ್ಸವ ಪೂರೈಸಿದ ಸಂಭ್ರಮದಲ್ಲಿ ಪಾಲಿಕೆ ಹಾಗೂ ಪೊಲೀಸ್ ಅಧಿಕಾರಿಗಳು ಸತತ 24 ಗಂಟೆಯ ಕರ್ತವ್ಯ ಮುಗಿಸಿ ನಿರಾಳವಾಗಿ ಕುಣಿದು ಸಂತಸ ವ್ಯಕ್ತಪಡಿಸಿದರು.