ಬಳ್ಳಾರಿ: ಸುಪ್ರೀಂ ಕೋರ್ಟ್ ನೀಡಿದ್ದ ಷರತ್ತು ಬದ್ಧ ಜಾಮೀನು ಅವಧಿ ಮುಗಿದ ಹಿನ್ನೆಲೆಯಲ್ಲಿ ನ. 6ರ ನಂತರ ಮಾಜಿ ಸಚಿವ ಜನಾರ್ಧನ ರೆಡ್ಡಿ ಬಳ್ಳಾರಿಯನ್ನು ಬಿಡಲಿದ್ದಾರೆ.
ಸೋಮವಾರ ಈ ಕುರಿತು ಕುರುಗೋಡಿನಲ್ಲಿ ಸ್ವತಃ ಅವರೇ ವಿಚಾರ ತಿಳಿಸಿದ್ದು, ನನಗೆ ಸುಪ್ರೀಂ ಕೋರ್ಟ್ ನೀಡಿದ್ದ ಷರತ್ತು ಬದ್ಧ ಜಾಮೀನಿನ ಅವಧಿ ಮುಗಿದಿದೆ. ಈ ಕಾರಣಕ್ಕೆ ನಾನು ನ. 6ರ ನಂತರ ಬಳ್ಳಾರಿಯಲ್ಲಿ ಇರುವಂತೆ ಇಲ್ಲ. 6ರ ನಂತರ ನಾನು ಗಂಗಾವತಿಯಲ್ಲಿ ನೆಲೆಸಲು ನಿರ್ಧರಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಇನ್ನು ಮುಂದಿನ ಚುನಾವಣೆಯಲ್ಲಿ ಅವರು ಸ್ಪರ್ಧೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸೂಕ್ತ ಸಮಯದಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳುವೆ ಎಂದು ಚುಟುಕಾಗಿ ಉತ್ತರಿಸಿದರು.