ಕೋಲಾರ ಸಿದ್ದರಾಮಯ್ಯ ಸ್ಪರ್ಧೆ ಇನ್ನು ಗೌಪ್ಯ

ಸಿದ್ದರಾಮಯ್ಯ
Advertisement

ಬೆಂಗಳೂರು: ಸಿದ್ದರಾಮಯ್ಯ ನಿವಾಸದಲ್ಲಿ ಇಂದು ಕೋಲಾರ ನಾಯಕರ ಸಭೆ ನಡೆಯಲಿದ್ದು, ಇಂದು ಮಧ್ಯಾಹ್ನ ಮೀಟಿಂಗ್‌ ಮಾಡಲಿದ್ದಾರೆ ಎಂದು ತಿಳಿದುಬಂದಿದೆ, ನಿನ್ನೆ ಸುಮಾರು 3 ಗಂಟೆಗಳ ಕಾಲ ನಡೆದ ಸಭೆಯಲ್ಲಿ 125 ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿದೆ. 71 ಮಂದಿ ಹಾಲಿ ಶಾಸಕರಿಗೆ ಮತ್ತೆ ಟಿಕೆಟ್​ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎನ್ನಲಾಗಿತ್ತಾದಾರು, ನಿನ್ನೆಯ ಸಭೆಯಲ್ಲೇ ನನ್ನ ಟಿಕೆಟ್ ಕ್ಲಿಯರ್ ಮಾಡಿಲ್ಲ. ಕೋಲಾರದಲ್ಲಿ ನಿಲ್ಲುವುದಿಲ್ಲ ಎಂದು ಪರೋಕ್ಷವಾಗಿ ಹೇಳಿ, ನಾನು ಹೈಕಮಾಂಡ್ ಗೆ ಬಿಟ್ಟಿದ್ದೇನೆ. ಅವರು ಏನು ತೀರ್ಮಾನ ಮಾಡ್ತಾರೋ ಮಾಡ್ಲಿ, ನಂಜನಗೂಡು ಟಿಕೆಟ್ ಬಗ್ಗೆ ನಿನ್ನೆ ಚರ್ಚೆಯಾಗಿಲ್ಲ.ಆದ್ರೆ ದೃವನಾರಾಯಣ ಪುತ್ರನಿಗೆ ಬಹುತೇಕ ಟಿಕೆಟ್ ನೀಡಲಾಗುವುದು. ಇಬ್ಬರೇ ಟಿಕೆಟ್‌ಗೆ ಅರ್ಜಿ ಹಾಕಿದ್ರು, ಆದ್ರೆ ಮಹದೇವಪ್ಪ ಹಿಂದೆ ಸರಿದಿದ್ದಾರೆ. ನಾನು ಕೂಡ ದೃವನಾರಾಯಣ ಪುತ್ರನಿಗೆ ಟಿಕೆಟ್ ಕೊಡಬೇಕು ಎಂದು ಒತ್ತಾಯ ಮಾಡಿದ್ದೇನೆ. ಯುಗಾದಿ ಹಬ್ಬದ ದಿನವೇ ಟಿಕೆಟ್ ಪಟ್ಟಿ ಹೊರ ಬರಲಿದೆ ಎಂದರು.