ಕೋಟ್ಯಾಂತರ ಮೌಲ್ಯದ ಗಾಂಜಾ ವಶ

Advertisement

ಬೀದರ್: ಜಿಲ್ಲೆಯ ಹೈದ್ರಾಬಾದ್-ಮುಂಬೈ ರಾಷ್ಟೀಯ ಹೆದ್ದಾರಿ ಮಂಗಲಗಿ ಟೋಲ್ ಪ್ಲಾಜಾ ಬಳಿ ತೆಲಂಗಾಣ ರಾಜ್ಯದಿಂದ ಟಾಟಾ ಎಸ್ ವಾಹನದಲ್ಲಿ ಮಹಾರಾಷ್ಟ್ರಕ್ಕೆ ಗಾಂಜಾ ಸಾಗಾಟವಾಗುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ಅಂದಾಜು ಒಂದು ನೂರು ಕಿಲೋ ಗ್ರಾಂ ತೂಕದ ಗಾಂಜಾ ಜಪ್ತಿ ಮಾಡಿಕೊಂಡು ಮಹಾರಾಷ್ಟ್ರ ಮೂಲದ ನಾಲ್ವರನ್ನು ವಾಹನ ಸಮೇತ ಬಂಧಿಸಿದ್ದಾರೆ. ಜಪ್ತಿ ಮಾಡಿದ ಗಾಂಜಾದ ಮೌಲ್ಯ ಅಂದಾಜು ಒಂದು ಕೋಟಿಗೂ ಹೆಚ್ಚು ಎನ್ನಲಾಗುತ್ತಿದ್ದು ಮನ್ನಾಎಖೇಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.