ಕುಷ್ಟಗಿ:ತಾಲೂಕಿನ ಗಡಚಿಂತಿ ಗ್ರಾಮದ ಗುಡ್ಡಗಾಡು ಪ್ರದೇಶದಲ್ಲಿ ಕಳೆದ ಒಂದು ವರ್ಷಗಳಿಂದ ಆಗಾಗ ಪ್ರತ್ಯಕ್ಷವಾಗುತ್ತಿದ್ದ ಚಿರತೆ ಸೋಮವಾರ ಕೊನೆಗೂ ಸೆರೆ ಸಿಕ್ಕಿದೆ ಇದರಿಂದಾಗಿ ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳು ನಿಟ್ಟುಸಿರುಬಿಟ್ಟಿದ್ದಾರೆ.
ಮಾಲಗಿತ್ತಿ ಗುಡ್ಡದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಳೆದ ಹಲವಾರು ತಿಂಗಳುನಿಂದ ಬೋನನ್ನು ಅಳವಡಿಸಿದ್ದರು.ಗಂಡು ಚಿರತೆ ಮಾಲಗಿತ್ತಿ ಅರಣ್ಯ ಪ್ರದೇಶದ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಸೆರೆಯಾಗಿದೆ.
ಗಡಚಿಂತಿ ಗ್ರಾಮದ ಮಹೇಶ ವಾಲಿಕಾರ ಎಂಬುವರ ಜಮೀನಿನಲ್ಲಿನ ಕುರಿ ಮೇಲೆ ದಾಳಿ ನಡೆಸಿ, ಅರ್ಧಂಬರ್ಧ ತಿಂದು ಬಿಸಾಡಿತ್ತು.ಚಿರತೆ ಊರಿನ ನಾಯಿ, ಹಸು ತಿಂದು ಹಾಕಿ ಗ್ರಾಮಸ್ಥರಲ್ಲಿ ಭಯ ಸೃಷ್ಟಿಸಿತ್ತು. ಇದರ ಹಾವಳಿಗೆ ಮಾಲಗಿತ್ತಿ, ಗಡಚಿಂತಿ, ನಾಗೇಂದ್ರಗಡ ಸುತ್ತಮುತ್ತಲಿನ ದನಗಾಯಿ, ಕುರಿಗಾಯಿಗಳು ಅರಣ್ಯ ಪ್ರದೇಶದಲ್ಲಿ ಕುರಿ, ದನ ಮೇಯಿಸುವುದಕ್ಕೆ,ರೈತರು,ಜನರು ಒಬ್ಬೊಬ್ಬರಾಗಿ ಜಮೀನಿಗೆ ತೆರಳಲು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾದ ಅಂತಹ ಸ್ಥಿತಿಗೆ ಗ್ರಾಮಸ್ಥರು ಬಂದೊದಗಿತ್ತು.