ಕೇಂದ್ರ ಸಚಿವರಿಗೆ ರಾಜ್ಯದ ನಿಲುವು ಮನವರಿಕೆ: ಮುಖ್ಯಮಂತ್ರಿ

BASAVARAJ BOMAI
Advertisement

ಹುಬ್ಬಳ್ಳಿ : ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರೆದ ಸಭೆಯಲ್ಲಿ ಕಾನೂನಾತ್ಕವಾಗಿ, ಆಡಳಿತಾತ್ಮಕವಾಗಿ ಮತ್ರು ರಾಜಕೀಯವಾಗಿ ರಾಜ್ಯದ ನಿಲುವು ಮನವರಿಕೆ ಮಾಡಿಕೊಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಪುನರ್ ವಿಂಗಡನೆಯಾಗಿ ಕಾಯ್ದೆಯಾಗಿದೆ. ಅದರ ಪಾಲನೆ ಸಂವಿಧಾನಬದ್ಧವಾಗಿ ಆಗುತ್ತಿದೆಯೇ ಎಂಬ ಪ್ರಶ್ನೆ ಎದುರಾಗಿದೆ. ರಾಜ್ಯ ಪುನರ್ ವಿಂಗಡನೆ ನಿರ್ಣಯಗಳನ್ನೇ ಮಹಾರಾಷ್ಟ್ರ ಪ್ರಶ್ನೆ ಮಾಡಿ ಸುಪ್ರೀಂ ಕೋರ್ಟ್ ಗೆ ಹೋಗಿದೆ. ಕಾನೂನಾತ್ಮಕವಾಗಿ ರಾಜ್ಯ ಸರ್ಕಾರವು ಸಮರ್ಥವಾಗಿ ತನ್ನ ನಿಲುವನ್ನು ಮಂಡಿಸಲಿದೆ. ವಿಷಯ ಕೋರ್ಟಿನಲ್ಲಿರುವುದರಿಂದ ಹೆಚ್ಚಿನ ವ್ಯಾಖ್ಯಾನ ಮಾಡಲು ಬಯಸಲ್ಲ ಎಂದು ಮುಖ್ಯಮಂತ್ರಿ ಹೇಳಿದರು.ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಕರೆದಿರುವ ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಕರೆದಿರುವ ಸಭೆಯಲ್ಲಿ ರಾಜ್ಯದ ಸ್ಪಷ್ಟ ನಿಲುವೇನು ಎಂಬುದನ್ನು ಮನವರಿಕೆ ಮಾಡಿಕೊಡುತ್ತೇನೆ ಎಂದರು.
ಗೋಡೆ ಕಟ್ಡಿರುವುದೇ ಕಾಂಗ್ರೆಸ್ ಸಾಧನೆ
ಮಹದಾಯಿ ನದಿ ನೀರು ರಾಜ್ಯಕ್ಕೆ ತರಲು ಹಿಂದೆ ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗಿ ಐದುವರೆ ಕಿ.ಮೀ ಕೆನಾಲ್ ನಿರ್ಮಾಣ ಮಾಡಿದ್ದು. ನಾನು ರಕ್ತದಲ್ಲಿ ಪತ್ರ ಬರೆದಿದ್ದರಿಂದಲೇ ಮಹದಾಯಿ ನದಿ ನೀರು ತರಲು ಕಾಲುವೆ ನಿರ್ಮಾಣ ಮಾಡಿದ್ದು. ಆದರೆ ಕಾಂಗ್ರೆಸ್ ಸರ್ಕಾರ ತನ್ನ ಅಧಿಕಾರ ಅವಧಿಯಲ್ಲಿ ಆ ಕಾಲುವೆಗೆ ಗೋಡೆ ಕಟ್ಟಿದ್ದಾರೆ. ಅದೇ ಅವರ ಸಾಧನೆ ಎಂದು ಮುಖ್ಯಮಂತ್ರಿ ಹೇಳಿದರು.
ಮಹಾದಾಯಿ ಸಮಾವೇಶ ಮಾಡಲು ಕಾಂಗ್ರೆಸ್ ನವರಿಗೆ ಯಾವ ನೈತಿಕ ಹಕ್ಕಿದೆ? ಸೋನಿಯಾ ಗಾಂಧಿ ಅವರು ಹಿಂದೆ ಮಹದಾಯಿ ನದಿಯ ಒಂದು ಹನಿ ನೀರನ್ನೂ ಕರ್ನಾಟಕಕ್ಕೆ ಬಿಡಲ್ಲ ಎಂದು ಘೋಷಣೆ ಮಾಡಿದ್ದರು. ಯಾವ ನೈತಿಕತೆ ಇದೆ ಕಾಂಗ್ರೆಸ್ ನವರಿಗೆ? ಸಮಾವೇಶ ಮಾಡಲಿ. ಚರ್ಚೆಗೆ ಬರಲಿ ಮಾತಾಡೋಣ ಎಂದು ಮುಖ್ಯಮಂತ್ರಿ ಸವಾಲು ಹಾಕಿದರು.