ಹುಬ್ಬಳ್ಳಿ: ಇಪಿಎಫ್ ಓ ಕಚೇರಿಯಲ್ಲಿ ಕೆಲಸ ಕೊಡಿಸುವುದಾಗಿ 6.40 ಲಕ್ಷ ರೂಪಾಯಿ ವಂಚನೆ ಮಾಡಿದ್ದ ಇಬ್ಬರನ್ನು ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ಮೂಲದ ನಗರದ ನಿವಾಸಿಗಳಾದ ವಿಠ್ಠಲ ಮತ್ತು ಸುಭಾಸ ಎಂಬುವರಿಗೆ ವಂಚಿಸಲಾಗಿದೆ.
ಇಬ್ಬರು ಯುವಕರಿಗೆ ಇಪಿಎಫ್ ಓ ಕಚೇರಿಯಲ್ಲಿ ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚನೆ ಮಾಡಿದ್ದರು. ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.