ಮೈಸೂರು: ಮಳೆ ನೀರು ನಿಂತ ಪರಿಣಾಮ ಭಾರೀ ಟೀಕೆಗೆ ಗುರಿಯಾಗಿದ್ದ ಮೈಸೂರು-ಬೆಂಗಳೂರು ಹೆದ್ದಾರಿಯ 23 ಕಿಮೀ ಮಾರ್ಗ ಇವತ್ತು ವಾಹನ ಸಂಚಾರಕ್ಕೆ ಮುಕ್ತವಾಗಲಿದೆ.
ಖುದ್ದು ಮೈಸೂರು ಸಂಸದ ಪ್ರತಾಪ್ ಸಿಂಹ ಈ ವಿಚಾರವನ್ನು ತಮ್ಮ ಟ್ವಿಟ್ನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಕೆಲವೊಮ್ಮೆ ಟೀಕೆಗಳು ನಮ್ಮ ಸಂಕಲ್ಪವನ್ನು ಗಟ್ಟಿಗೊಳಿಸುತ್ತವೆ. ರಾಮನಗರ-ಚನ್ನಪಟ್ಟಣ ನಡುವೆ 23 ಕಿಮೀ ರಸ್ತೆ ನಿಮ್ಮ ಸಂಚಾರಕ್ಕೆ ತೆರವು ಮಾಡುತ್ತಿದ್ದೇವೆ ಎಂದು ಪ್ರತಾಪ್ ಸಿಂಹ ಬರೆದುಕೊಂಡಿದ್ದಾರೆ. ಸ್ವತಃ ನೀವೇ ಬಂದು ರಸ್ತೆ ನೋಡಿ ಎಂದು ಹೇಳಿದ್ದಾರೆ. ರಸ್ತೆ ಗುಣಮಟ್ಟದ ಬಗ್ಗೆ ಕೆಲವರು ಟೀಕೆ ಮಾಡಿದ್ದರು.