ಕೆರೆಗೆ ಹಾರಿ ತಾಯಿ, ಇಬ್ಬರು ಮಕ್ಕಳು ಆತ್ಮಹತ್ಯೆ

Advertisement

ಚಿತ್ರದುರ್ಗ: ಕೆರೆಗೆ ಹಾರಿ ತಾಯಿ ಮತ್ತು ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹಿರೇಕೆರೆಯಲ್ಲಿ ಇಂದು ನಡೆದಿದೆ.
ಹಿರೇಹಳ್ಳಿ ಮೂಲದ ದುರ್ಗಮ್ಮ(25) ಮೃತ ದುರ್ದೈವಿ. ಇನ್ನಿಬ್ಬರು ಮಕ್ಕಳಾದ ಪುತ್ರ ಅಜಯ್ (06) ಪುತ್ರಿ ಸೇವಂತಿ (04) ಪತ್ತೆಗಾಗಿ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದಾರೆ.
ಕೆರೆ ವೀಕ್ಷಣೆಗೆ ಪತಿ ಮಲ್ಲಿಕಾರ್ಜುನ್ ಜೊತೆ ಬಂದಿದ್ದ ಪತ್ನಿ & ಮಕ್ಕಳು ಬಂದಿದ್ದರು. ಸ್ಥಳಕ್ಕೆ ನಾಯಕನಹಟ್ಟಿ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.