ಬೆಂಗಳೂರು: ಕೆಜಿಎಫ್ ಚಿತ್ರದಲ್ಲಿ ತಾತನ ಪ್ರಮುಖ ಪಾತ್ರವೊಂದರಲ್ಲಿ ಮಿಂಚಿದ್ದ ಕೃಷ್ಣೋಜಿ ರಾವ್ ಅನಾರೋಗ್ಯದಿಂದಾಗಿ ಇಂದು ಕೊನೆಯುಸಿರೆಳೆದಿದ್ದಾರೆ.
ಸಂಬಂಧಿಕರ ಮನೆಗೆ ತೆರಳಿದ್ದ ಅವರು, ಅನಾರೋಗ್ಯದ ಕಾರಣದಿಂದಾಗಿ ಕೂಡಲೇ ಆಸ್ಪತ್ರೆಗೆ ದಾಖಲಾಗಿದ್ದರು. ಶ್ವಾಸಕೋಶದ ಸೋಂಕು ಉಂಟಾಗಿದ್ದರಿಂದ ಅವರನ್ನು ಬೆಂಗಳೂರಿನ ಸೀತಾ ಸರ್ಕಲ್ ಬಳಿ ಇರುವ ವಿನಾಯಕ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ವೈರಲ್ ಆಗಿದ್ದ ತಾತನ ಡೈಲಾಗ್…
‘ನಿಮಗೊಂದು ಸಲಹೇ ಕೊಡ್ತೀನಿ. ನೀವು ಮಾತ್ರ ಅವನಿಗೆ ಅಡ್ಡ ನಿಲ್ಲೋಕೆ ಹೋಗಬೇಡಿ ಸರ್.. ‘ ಕೆಜಿಎಫ್ ಸಿನಿಮಾ ನೋಡಿದವರಿಗೆ ಈ ಡೈಲಾಗ್ ಗೊತ್ತಿರುತ್ತದೆ. ತಾತ ಹೇಳಿರುವ ಈ ಡೈಲಾಗ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಕೆಜಿಎಫ್ ಪಾರ್ಟ್-1 ಮತ್ತು ಪಾರ್ಟ್-2ನ್ಲೂ ಕಾಣಿಸಿಕೊಂಡಿರುವ ನಟ ಕೃಷ್ಣ ಜಿ ರಾವ್ ಅವರು ಕೆಜಿಎಫ್ ತಾತ ಅಂತನೆ ಫೇಮಸ್ ಆಗಿದ್ದಾರೆ.