ಕೂಡಲಸಂಗಮದಲ್ಲಿ ಜ. ೧೨ರಿಂದ ಮೂರು ದಿನ ಶರಣ ಮೇಳ

Advertisement

ಬಾಗಲಕೋಟೆ: ಸುಕ್ಷೇತ್ರದ ಕೂಡಲಸಂಗಮದಲ್ಲಿ ಬಸವ ಧರ್ಮಪೀಠದಿಂದ ಜ. ೧೨ರಿಂದ ೧೪ರವರೆಗೆ ಮೂರು ದಿನಗಳ ಕಾಲ ಶರಣ ಮೇಳ ಆಯೋಜಿಸಲಾಗಿದ್ದು, ಜ. ೧೩ರಂದು ಮೇಳದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಹ್ವಾನಿಸಲಾಗಿದೆ ಎಂದು ಪೀಠದ ಅಧ್ಯಕ್ಷೆ ಮಾತೆ ಗಂಗಾದೇವಿ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜ. ೧೨ರಂದು ರಾಷ್ಟ್ರೀಯ ಬಸವ ದಳದ ೩೨ನೇ ಅಧಿವೇಶನ ನಡೆಯಲಿದೆ. ಜ. ೧೩ ರಂದು ೩೬ನೇ ಶರಣ ಮೇಳಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡುವರು ಎಂದು ತಿಳಿಸಿದರು.