ಹುಬ್ಬಳ್ಳಿ: ಬಿಜೆಪಿ ಸುಳ್ಳಿನ ಎಟಿಎಂ ಎನ್ನುವ ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರದು ಯಾವ ಎಟಿಎಂ? ಇದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಮಾಡಿದ ಪ್ರಶ್ನೆ.
ಶನಿವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಯವರು ವಚನ ಭ್ರಷ್ಟರು ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ೨೦೦೮ ರಲ್ಲಿ ಸುಳ್ಳು ಹೇಳಿದವರು ಎಂಬುದು ಎಲ್ಲರಿಗೂ ಗೊತ್ತಿದೆ. ಅವರ ಕುಟುಂಬ ಸಮಾಜಕ್ಕಾಗಲಿ, ದೇಶಕ್ಕಾಗಿ ತ್ಯಾಗ ಮಾಡುವವರಲ್ಲ. ಅವರಿಗೆ ಇಡೀ ಕುಟುಂಬದ ಬೆಳವಣಿಗೆಗೆ ಚಿಂತೆಯಾಗಿದೆ ಎಂದು ಲೇವಡಿ ಮಾಡಿದರು.
ಪಂಚ ರತ್ನ ಯಾತ್ರೆಯಲ್ಲಿಯೂ ಅವರದೇ ಕುಟುಂಬದವರಿದ್ದಾರೆ. ದೇವಗೌಡರು ಅವರ ಮರಿ ಮೊಮ್ಮಗನಿಗೆ ಬುದ್ಧಿ ಬಂದರೆ ಅವರನ್ನು ರಾಜಕೀಯಕ್ಕೆ ಕರೆತರುತ್ತಾರೆ. ಅಂದೊAದು ಕುಟುಂಬ ಪ್ರೇರಿತ ಭ್ರಷ್ಟಾ ಪಕ್ಷ ಅಂಥವರಿಗೆ ಏನು ಪ್ರತಿಕ್ರಿಯಿಸಬೇಕು ಎಂದು ಹರಿಹಾಯ್ದರು.
೪೦ ಶಾಸಕರ ರಾಜೀನಾಮೆ ಪ್ರತಿಕ್ರಿಯಿಸಲ್ಲ : ಮಹಾದಾಯಿ ಯೋಜನೆ ಕುರಿತು ಗೋವಾದ ೪೦ ಶಾಸಕರು ರಾಜೀನಾಮೆ ನೀಡುವ ಕುರಿತು ಈ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ. ನಮ್ಮ ನ್ಯಾಯಯುತವಾದ ಬೇಡಿಕೆಗೆ ಡಿಪಿಆರ್ ಅನುಮತಿ ದೊರೆತಿದೆ.