ಕುಮಾರಸ್ವಾಮಿಯವರಿಂದ ವಿಷ ಬೀಜ ಬಿತ್ತುವ ಕೆಲಸ

ಶ್ರೀರಾಮುಲು
Advertisement

ಹುಬ್ಬಳ್ಳಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರಾದರೂ ಮುಖ್ಯಮಂತ್ರಿ ಆಗಬಹುದು. ಬ್ರಾಹ್ಮಣ ಸಮಾಜದ ನಾಯಕರ ಆಗುವುದರಲ್ಲಿ ತಪ್ಪಿಲ್ಲ. ಈ ರೀತಿಯ ಹೇಳಿಕೆ ನೀಡುವ ಮೂಲಕ ಸಮಾಜದಲ್ಲಿ ವಿಷ ಬೀಜ ಬಿತ್ತುವ ಕೆಲಸ ಮಾಡತ್ತಿದ್ದಾರೆ ಎಂದು ಸಾರಿಗೆ ಸಚಿವ ಶ್ರೀರಾಮಲು ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು.

ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಕುರಿತು ಪೇಶ್ವ ಡಿಎನ್ಎ ಮನೆಯತನದ ಎಂಬ ಹೇಳಿಕೆ ನೀಡುತ್ತುರುವುದು ಸರಿಯಲ್ಲ. ಕುಮಾರಸ್ವಾಮಿ ಅವರು ಹೀಗೇ ಏಕೆ ಮಾತನಾಡಿದ್ದಾರೆ ಎಂದು ನನಗೆ ಊಹಿಸಲಾಗುತ್ತಿಲ್ಲ ಎಂದರು.

ಚುನಾವಣೆ ಸಮೀಸುತ್ತಿರುವುದರಿಂದ ಹಾಗೂ ರಾಜಕಾರಣದ ಸಲುವಾಗಿ ವಯಕ್ತಿಕ ಹೇಳಿಕೆ ನೀಡುವುದು ಬಿಡಬೇಕು. ಮುಖ್ಯಮಂತ್ರಿ ಕುರಿತು ಪಕ್ಷದಲ್ಲಿ ಇಲ್ಲಿಯ ವರೆಗೆ ಯಾವುದೇ ಚರ್ಚೆಯಾಗಿಲ್ಲ ಎಂದು ಹೇಳಿದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಮುಖ್ಯಮಂತ್ರಿಯಾಗಲು ಯೋಗ್ಯ ನಾಯಕರಾಗಿದ್ದಾರೆ. ಬಿಜೆಪಿ ಹಿರಿಯ ನಾಯಕರಾದ ಅವರ ಬಗ್ಗೆ ಏಕ ವಚನದಲ್ಲಿ ಮಾತನಾಡುವುದು ಶೋಭೆ ತರುವುದಲ್ಲ ಎಂದರು.

ಪ್ರಹ್ಲಾದ ಜೋಶಿಯವರನ್ನು ಕೇವಲ ಬ್ರಾಹ್ಮಣವೆಂದು ಹಾಗೂ ಜಾತಿ ಆಧಾರವಾಗಿ ಅವರಿಗೆ ಗೌರ ನೀಡುತ್ತಿಲ್ಲ. ಅವರು ಎಲ್ಲ ಧರ್ಮ ಮೀರಿದಂತಹ ನಾಯಕರಾಗಿದ್ದಾರೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಅಭಿವೃದ್ಧಿ ಅನೇಕ‌ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.

ಬಿ.ಎಸ್. ಯಡಿಯೂರಪ್ಪ ಅವರು ಉಪಮುಖ್ಯಮಂತ್ರಿಯಾದಾಗ ನಾನು‌ ಮಂತ್ರಿಯಾಗಿದ್ದೆ. ಆ ಸಮಯದಲ್ಲಿ ಕುಮಾರಸ್ವಾಮಿ ಅವರು ಯಾವ ರೀತಿ ನಡೆಸಿಕೊಂಡರು ಎಂಬುದು ನನಗೆ ಗೊತ್ತಿದೆ ಎಂದರು.

ಮಾಜಿ ಸಚಿವ ಜನಾರ್ಧನಾ ರೆಡ್ಡಿ ಅವರು ಪ್ರಾದೇಶಿಕ ಪಕ್ಷ ಆರಂಭಿಸಿದ್ದಾರೆ. ಅವರ‌ ಮನವಲಿಸುವ ಕಾರ್ಯ ನಾವು ಮಾಡುತ್ತಿಲ್ಲ. ಈಗ ಚುನಾವಣೆ ಸಮೀಪಿಸಿದ್ದು, ನಮ್ಮ ಪಕ್ಷದ ಸಿದ್ಧಾಂತ ಪ್ರಕಾರ ಪ್ರಧಾನಿ ಮೋದಿ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರ ಮಾಡಿ ದಂತಹ ಅಭಿವೃದ್ಧಿ ಕೆಲಸ ಮುಂದಿಟ್ಟುಕೊಂಡು ಜನರಿಗೆ ಮತ ಕೇಳುವ ಕೆಲಸ ಮಾಡುತ್ತೇವೆ. ನಾನು ಬಳ್ಳಾರಿ ಜಿಲ್ಲೆಯಿಂದ ಸ್ಪರ್ಧೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.