ಕುಕ್ಕರ್, ಮಿಕ್ಸಿ ಬ್ಲಾಸ್ಟ್ ಆಗಬಹುದು ಹುಷಾರಾಗಿರಿ ಎಂದ ರಮೇಶ ಜಾರಕಿಹೊಳಿ

ರಮೇಶ
Advertisement

ಬೆಳಗಾವಿ: ಕುಕ್ಕರ್, ಮಿಕ್ಸಿ ಬ್ಲಾಸ್ಟ್ ಆಗುತ್ತವೆ ಅದನ್ನು ಉಪಯೋಗಿಸುವಾಗ ಹುಷಾರಾಗಿರಬೇಕು ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಗ್ರಾಮೀಣ ಭಾಗದ ಶಾಸಕರು ಮೊದಲ ಬಾರಿಗೆ ಕುಕ್ಕರ್ ಕೊಟ್ಟರು. ಈ ಸಲ ಮಿಕ್ಸರ್ ಕೊಟ್ಟರು. ಇದಕ್ಕೆ ಮಾರುಕಟ್ಟೆಯಲ್ಲಿ 400 ಅಥವಾ 500 ರೂಪಾಯಿ ಇರಬಹುದು. ಬೆಂಗಳೂರಿನಲ್ಲಿ ಇತ್ತೀಚಿಗೆ ಒಂದು ಕಾಂಗ್ರೆಸ್ ಎಂಎಲ್‌ಎ ಕ್ಷೇತ್ರದಲ್ಲಿ ಮಿಕ್ಸರ್ ಬ್ಲಾಸ್ಟ್ ಆಗಿ ಎಷ್ಟೋ ಜನ ಆಸ್ಪತ್ರೆ ಸೇರಿದ್ದಾರೆ. ಮಿಕ್ಸರ್ ಒಂದಕ್ಕೆ 500 ರೂ.ಇರಬಹುದು. ಇದರ ಫ್ಯಾಕ್ಟರಿ ಇರುವುದು ಕನಕಪುರದಲ್ಲಿ. ಕನಕಪುರದಲ್ಲಿ ಯಾರಿದ್ದಾರೆ. ಡುಬ್ಲಿಕೇಟ್ ತಯಾರಿಸುವ ಮಹಾ ನಾಯಕರಿದ್ದಾರೆ. ಅವರು ಕೊಡುವ ಕುಕ್ಕರನ್ನು ಹುಷಾರಾಗಿ ಚಾಲು ಮಾಡಬೇಕು. ಯಾಕೆಂದರೆ ಅದು ಸರಿ ಇರಲ್ಲ. ಮಾರುಕಟ್ಟೆಯಲ್ಲಿ ಇದಕ್ಕೆ ಬಹುಶಃ 200 ರೂ.ಇರಬಹುದು. ಬಡವರು ಆಸೆಯಿಂದ ಪಡೆಯುತ್ತಾರೆ. ಜನ ಇದರ ಬಗ್ಗೆ ಜಾಗೃತಿ ವಹಿಸಬೇಕು. ಮಾರುಕಟ್ಟೆಯಲ್ಲಿ ಒಂದು ಸಾವಿರ ರೂಪಾಯಿಗೆ ಐಎಸ್‌ಐ ಮಾರ್ಕ್ ಕುಕ್ಕರ್ ಇದೆ. ಆದರೆ ಇವರು ಹಂಚುವ ಕುಕ್ಕರ್, ಮಿಕ್ಸರ್ ಉಪಯೋಗಿಸುವಾಗ ಹುಷಾರಾಗಿರಬೇಕು ಕಿವಿಮಾತು ಹೇಳಿದರು.