ಕಾಲುವೆಗೆ ಕಾರು ಬಿದ್ದು ಮೂವರ ಸಾವು

Advertisement

ಮಸ್ಕಿ: ಮಸ್ಕಿ-ಸಿಂಧನೂರು ಮಾಗ೯ದ ಗುಡದೂರು ಬಳಿ (ಮಸ್ಕಿ ಸಮೀಪದ) ತುಂಗಭದ್ರಾ ಎಡದಂಡೆ ಕಾಲುವೆಗೆ ಟಾಟಾ ಇಂಡಿಗೋ ಕಾರು ಉರುಳಿ ಮೂವರು ಜಲ ಸಮಾಧಿಯಾದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.
ಪಟ್ಟಣದ ಹಣತೆ ದೂರದಲ್ಲಿನ ತುಂಗಭದ್ರಾ ಕಾಲುವೆಗೆ ಉರುಳಿದೆ. ಎನ್.ಸೂಯ೯ನಾರಾಯಣರಾವ (62), ಎನ್. ಸುಬ್ಬಲಕ್ಷ್ಮಿ (58), ಪತಿ , ಪತ್ನಿ ಸಾವನ್ನಪ್ಪಿದ್ದಾರೆ. ಇಬ್ಬರ ಶವವನ್ನು ಸ್ಥಳೀಯರು ಹೊರ ತೆಗದಿದ್ದಾರೆ. ಚಾಲಕ ಕೊಚ್ಚಿ ಹೋಗಿದ್ದು ಪತ್ತೆ ಕಾಯ೯ ನಡೆದಿದೆ. ಮೃತರ ಮಗನಾದ ಚಾಲಕ ಎನ್.ಶ್ರೀನಿವಾಸ (36) ಎಂದು ಗುರುತಿಸಲಾಗಿದೆ. ಇವರು ಗಂಗಾವತಿ ತಾಲೂಕಿನ ಹೊಸಗೇರಿ ಕ್ಯಾಂಪ್ ನವರಾಗಿದ್ದು, ಲಿಂಗಸುಗೂರು ತಾಲೂಕಿನ ಗೋನಹೊಟ್ಟಿ ಗ್ರಾಮದಲ್ಲಿ ಜಮೀನು ಸಾಗುವಳಿ ಮಾಡುತ್ತಿದ್ದು, ಹೊಸಗೇರಿ ಕ್ಯಾಂಪನಿಂದ ಗೋನಹೊಟ್ಟಿ ಜಮೀನು ಸಾಗುವಳಿಗೆ ಹೋಗುವ ಸಂದಭ೯ದಲ್ಲಿ ಮಸ್ಕಿ ಪಟ್ಟಣ ಸಮೀಪದ ತುಂಗಭದ್ರಾ ಎಡದಂಡೆ ಕಾಲುವೆಗೆ ಕಾರು ಉರುಳಿ ಮೂವರು ಸಾವನ್ನಪ್ಪಿದ್ದಾರೆ. ಈ ದುಘ೯ಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.
ಕಾರು ಆಂಧ್ರ ಪಾಸಿಂಗ್ ಇದ್ದು, ನೆಕ್ಕಂಟಿ ಶ್ರೀನಿವಾಸ ಎಂಬುವವರಿಗೆ ಸೇರಿದೆ. ಘಟನ ಸ್ಥಳಕ್ಕೆ ಮಸ್ಕಿ ಸಿಪಿಐ ಸಂಜೀವ ಬಳಿಗಾರ, ಪಿಎಸ್ ಐ ಸಿದ್ಧರಾಮ ಬಿದರಾಣಿ ಆಗಮಿಸಿ ಟ್ರ್ಯಾಕ್ಟರ್ ಹಾಗೂ ಕ್ರೇನ್ ಸಹಾಯದಿಂದ ಕಾರು ಹೊರ ತೆಗೆಯಲಾಯಿತು. ಕಾಲುವೆ ಬಳಿ ಜನಜಂಗುಳಿ ನೆರದಿತ್ತು. ಬಳಗಾನೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.