ಕಾರ್ಮಿಕನ ಮೇಲೆ ಲಾರಿ ಹರಿದು ಸಾವು

Advertisement

ಹುಬ್ಬಳ್ಳಿ : ನವನಗರದ ಎಪಿಎಂಸಿಯಲ್ಲಿ ಇಂದು ಬೆಳಗಿನ ಜಾವ ಕಾರ್ಮಿಕನೊಬ್ಬನ ಮೇಲೆ ಲಾರಿ ಹರಿದ ಪರಿಣಾಮ ಕಾರ್ಮಿಕ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಎಪಿಎಂಸಿಯಲ್ಲಿನ ಉಳ್ಳಾಗಡ್ಡಿ ಮಾರ್ಕೇಟ್‌ನಲ್ಲಿ ಉಳ್ಳಾಗಡ್ಡಿ ಒಯ್ಯುಲು ಬಂದಿದ್ದ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಕಾರ್ಮಿಕನ ತಲೆಯ ಮೇಲೆ ಹರಿದ ಪರಿಣಾಮ ಕಾರ್ಮಿಕ ಮೃತಪಟ್ಟಿದ್ದಾನೆ.
ಇನ್ನು ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ನವನಗರ ಎಪಿಎಂಸಿ ಹಾಗೂ ಉತ್ತರ ಸಂಚಾರ ಠಾಣೆಯ ಪೊಲೀಸರು ಭೇಟಿಯನ್ನು ನೀಡಿ ಮೃತದೇಹವನ್ನು ಕಿಮ್ಸ್ ಶವಾಗಾರಕ್ಕೆ ರವಾನೆ ಮಾಡಿದ್ದಾರೆ . ಸದ್ಯ ಮೃತಪಟ್ಟ ಕಾರ್ಮಿಕ ಯಾರು ಎಂಬ ಮಾಹಿತಿ ಇನ್ನು ತಿಳಿದು ಬಂದಿಲ್ಲ