ಕಾಡಾನೆ ದಾಳಿ: ಇಬ್ಬರು ಸಾವು

Advertisement

ಕಡಬ: ಕುಟ್ರುಪಾಡಿ ಗ್ರಾಮದ ಮೀನಾಡಿ ಸಮೀಪ ಮುಂಜಾನೆ ಆನೆ ದಾಳಿ ನಡೆಸಿದ್ದು ಯುವತಿ ಸಹಿತ ಇಬ್ಬರು ಮೃತಪಟ್ಟಿದ್ದಾರೆ.
ರೆಂಜಿಲಾಡಿ ಗ್ರಾಮದ ನೈಲ ನಿವಾಸಿ ರಾಜು ರೈ ಅವರ ಪುತ್ರಿ ಪೇರಡ್ಕ ಹಾಲು ಸೊಸೈಟಿಯಲ್ಲಿ ಸಿಬ್ಬಂದಿಯಾಗಿರುವ ರಂಜಿತಾ (21) ಎಂಬವರು ಬೆಳಗ್ಗೆ ಸೊಸೈಟಿ ಗೆ ಮನೆಯಿಂದ ಹೋಗುತ್ತಿದ್ದ ವೇಳೆ ಮೀನಾಡಿ ಎಂಬಲ್ಲಿ ಆನೆ ದಾಳಿ ನಡೆಸಿದೆ. ಇದೇ ವೇಳೆ ಆಕೆಯ ಬೊಬ್ಬೆ ಕೇಳಿ ಅಲ್ಲಿಗೆ ಧಾವಿಸಿದ ಸ್ಥಳೀಯ ನಿವಾಸಿ ರಮೇಶ್ ರೈ (55) ಎಂಬವರ ಮೇಲೆಯೂ ಆನೆ ಅಟ್ಟಹಾಸ ಮೆರೆದಿದೆ. ರಮೇಶ್ ರೈ ಸ್ಥಳದಲ್ಲಿ ಮೃತಪಟ್ಟರೆ ರಂಜಿತ ಅವರು ನೆಲ್ಯಾಡಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೆ ಬರಬೇಕಿದೆ..