ದಾವಣಗೆರೆ: ಜಮೀನಿಗೆ ನುಗ್ಗಿರುವ ಕಾಡಾನೆ ದಾಳಿಗೆ ಸಿಲುಕಿ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಸೋಮ್ಲಾಪುರ ಗ್ರಾಮದಲ್ಲಿ ನಡೆದಿದೆ. ಕವನ (17) ಮೃತ ಬಾಲಕಿ. ತಾಲ್ಲೂಕಿನ ಸೋಮ್ಲಾಪುರ ಗ್ರಾಮದ ಬಳಿಯ ಹೊಲದಲ್ಲಿ ತಾಯಿ ಮತ್ತು ಮಗಳು ಕೆಲಸ ಮಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಕಾಡಾನೆ ಪ್ರತ್ಯಕ್ಷವಾಗಿ ತಾಯಿ ಮಗಳಿಬ್ಬರ ಮೇಲೆ ದಾಳಿ ನಡೆಸಿದ್ದು ಬಾಲಕಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾಳೆ.
ಬಾಲಕಿ ತಾಯಿ ಮಂಜುಳಾ ಎಂಬ ಮಹಿಳೆಗೆ ತೀವ್ರ ಸ್ವರೋಪದ ಗಾಯಗಳಾಗಿದ್ದು ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯನ್ನು ತಿಳಿದ ಸೋಮಲಾಪುರ ಗ್ರಾಮದ ನಿವಾಸಿ ಶ್ರೀನಿವಾಸ್ ತಕ್ಷಣವೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮತ್ತು ಸಂತೆಬೆನ್ನೂರು ಪೊಲೀಸರಿಗೆ ದೂರವಾಣಿ ಕರೆಮಾಡಿ ವಿಷಯ ತಿಳಿಸಿದಾಗ ವಲಯ ಅರಣ್ಯಾಧಿಕಾರಿ ಜಗದೀಶ್, ಪಿ.ಎಸ್.ಐ.ದೇವರಾಜ್, ಸಿಬ್ಬದ್ದಿಗಳೊಂದಿಗೆ ದಾವಿಸಿ ಗ್ರಾಮದವರ ಸಹಕಾರದಿಂದ ಕಾಡಾನೆಯನ್ನು ಅಲ್ಲಿಂದ ಕಾಲ್ಕೀಳುವಂತೆ ಮಾಡಲಾಗಿದೆ. ಪ್ರಕರಣ ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.