ಕಾಂಗ್ರೆಸ್ ಸದಸ್ಯರ ಧರಣಿ ಹಿನ್ನೆಲೆಯಲ್ಲಿ ನಡೆದ ಸಂಧಾನ ಸಭೆ ಯಶಸ್ವಿಯಾಯಿತು. ಸ್ಪೀಕರ್ ಕಾಗೇರಿ ಮನವಿಯಂತೆ ಕಾಂಗ್ರೆಸ್ ಧರಣಿ ವಾಪಸ್ ಪಡೆದುಕೊಂಡಿತು. ಬಳಿಕ ಮಾತನಾಡಿದ ಸ್ಪೀಕರ್ ಕಾಗೇರಿ, ಸದನದಲ್ಲಿ ನಡೆದ ಘಟನೆ ನಾವು ನೋಡಿದ್ದೇವೆ. ತಮ್ಮ ತಮ್ಮ ಸ್ಥಾನಕ್ಕೆ ಬರುವಂತೆ ಮನವಿ ಮಾಡಿದರು. ನಾನು ನಿಮ್ಮ ಕ್ಷೇತ್ರದ ಜನರ ಬಗ್ಗೆ ನಿಮ್ಮ ಬಗ್ಗೆ ಯಾವತ್ತು ಗೌರವ ಇದೆ. ನಿಮ್ಮ ತಂದೆಯ ಜೊತೆಗಿನ ಒಡನಾಟ ಕಾರಣದಿಂದ ಸಲಿಗೆಇದೆ. ಅವರ ಶಿಸ್ತಿನ ಜೀವನದಿಂದ ಪ್ರೇರಣೆ ಪಡೆದುಕೊಂಡಿದ್ದೆ. ವೈಯಕ್ತಿಕ ಸಂಬಂಧದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅನ್ಯತಾ ಭಾವಿಸಬೇಡಿ, ಇಲ್ಲಿಗೆ ಮುಗಿಸೋಣಎಂದು ಸ್ಪೀಕರ್ ಮನವಿ ಮಾಡಿದರು. ಬಳಿಕ ಈಶ್ವರ್ ಖಂಡ್ರೆ ಮಾತನಾಡಿ, ನಾನುಬೀದರ್ ಕಡೆಯಿಂದ ಬಂದವನು, ಸಹಜವಾಗಿ ಮಾತನಾಡಿದರೂ ಧ್ವನಿ ಗಟ್ಟಿ ಇರುವುದರಿಂದ ಟೀಕೆ ಮಾಡಿದಂತೆ ಕಾಣುತ್ತದೆ. ಆದರೆ ನನ್ನನ್ನು ಆಯ್ಕೆ ಮಾಡಿ ಕ್ಷೇತ್ರದ ಜನರು ತಪ್ಪು ಮಾಡಿದ್ದಾರೆ ಎಂದು ಹೇಳಿದ್ದು, ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.