ಹುಬ್ಬಳ್ಳಿ: ಕಾಂಗ್ರೆಸ್‌ನಲ್ಲಿ ಎಂಥವರು ಇದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಇತಂಹ ಸಂಸ್ಕೃತಿ ಆರಂಭವಾಗಿದ್ದೆ ಕಾಂಗ್ರೆಸ್ ನಿಂದ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಇಂತಹ ತಲೆ ಹಿಡುಕರು ಇದ್ದಾರೆ ಎಂಬ ಮಾಜಿ ಸಚಿವ ದಿನೇಶ್ ಗುಂಡುರಾವ್ ಅವರ ಟ್ವೀಟ್ ಗೆ ಈ ಮೇಲಿನಂತೆ ಪ್ರತಿಕ್ರಿಯಿಸಿದರು.
ಸ್ಯಾಂಟ್ರೋ ರವಿ ಬಿಜೆಪಿ ಕಾರ್ಯಕರ್ತ ಹೌದು ಅಲ್ಲೋ ಅನ್ನೋದನ್ನು ಪರಿಶೀಲನೆ ಮಾಡೋಕೆ ಹೇಳಲಾಗಿದೆ ಎಂದರು. ಅಂತಹ ತಲೆಹಿಡುಕರು ಕಾಂಗ್ರೆಸ್ ನಲ್ಲಿ ಮಾತ್ರ ಇರಲು ಸಾಧ್ಯ ಎಂದರಲ್ಲದೆ, ಸ್ಯಾಂಟ್ರೋ ರವಿ ಬಂಧನ ಗೊತ್ತಿಲ್ಲ. ನಾನು ವಿಮಾನದಲ್ಲಿದ್ದೆ ಎಂದರು. ಕಾಂಗ್ರೆಸ್ ರಾಜಕೀಯ ದಿವಾಳಿತನಕ್ಕೆ ಹೋಗಿದೆ. ಹೀಗಾಗಿ ಅವರು ಹತಾಶರಾಗಿದ್ದಾರೆ. ಅದಕ್ಕೆ ಉಚಿತ ಯೋಜನೆಗಳ ಬಗ್ಗೆ ಹೇಳುತ್ತಿದ್ದಾರೆ. ಕಾಂಗ್ರೆಸ್ ನವರು ಸುಳ್ಳು ಆಶ್ವಾಸನೆ ನೀಡಿ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದಾರೆ ಎಂದರು.
ಯುವಜನೋತ್ಸವ ಸಮಾರಂಭಕ್ಕೆ ಮೋದಿ ಆಗಮಿಸುತ್ತಿದ್ದಾರೆ. ಯುವಕರಿಂದ ದೇಶ ಕಟ್ಟಬಹುದು. ಯುವಕರಿಗೆ ಕೌಶಲ ತರಬೇತಿ ನೀಡಿದರೆ ದೇಶ ಕಟ್ಟಬಹುದು. ನೂತನ ಶಿಕ್ಷಣ ನೀತಿಯಿಂದ ಮೂರೇ ವರ್ಷದಲ್ಲಿ ಎರಡು ಪದವಿ ತೆಗೆದುಕೊಳ್ಳಬಹುದು. ಯುವಕರಿಗೆ ಮುದ್ರಾ ಯೋಜನೆ. ಖೇಲೋ ಇಂಡಿಯಾ ಸೇರಿದಂತೆ ಇತರೆ ಯೋಜನೆ ಜಾರಿಗೊಳಿಸಿದ್ದಾರೆ. ಮೋದಿಯವರು ಬರುತ್ತಿರುವುದರಿಂದ ಯುವಕರಲ್ಲಿ ಉತ್ಸಾಹ ಹೆಚ್ಚಾಗಲಿದೆ ಎಂದರು.