ಕಾಂಗ್ರೆಸ್ ಮೂರನೇ ಪಟ್ಟಿ ರಿಲೀಸ್‌

ಕಾಂಗ್ರೆಸ್‌
Advertisement

ರಾಜ್ಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ತನ್ನ ಮೂರನೇ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ. ಕಾಂಗ್ರೆಸ್ 58 ಕ್ಷೇತ್ರಗಳಲ್ಲಿ ಟಿಕೆಟ್‌ ಬಾಕಿ ಇರಿಸಿಕೊಂಡಿತ್ತು. ಇದರಲ್ಲಿ 43 ಕ್ಷೇತ್ರಗಳಿಗೆ ಟಿಕೆಟ್‌ ಘೋಷಣೆ ಮಾಡಲಾಗಿದ. ಕೋಲಾರದಿಂದ ಸಿದ್ಧರಾಮಯ್ಯಗೆ ಟಿಕೆಟ್‌ ನಿರಾಕರಿಸಲಾಗಿದೆ. ಅಥಣಿಯಿಂದ ಲಕ್ಷ್ಮಣ ಸವದಿಗೆ, ಮಂಗಳೂರು ದಕ್ಷಿಣದಲ್ಲಿ ಲೋಬೋ, ಪುತ್ತೂರಿನಲ್ಲಿ ಅಶೋಕ್ ಕುಮಾರ್ ರೈಗೆ ಟಿಕೆಟ್ ನೀಡಿದ್ದು  ನಟಿ ಉಮಾಶ್ರೀ ಅವರಿಗೆ ತೆರೆದಾಳದಿಂದ ಟಿಕೆಟ್ ನಿರಾಕರಿಸಲಾಗಿದೆ.

ಮೂರನೇ ಪಟ್ಟಿಯಲ್ಲಿ 43 ಕ್ಷೇತ್ರಗಳಿಗೆ ಹೆಸರು ಪ್ರಕಟಿಸಲಾಗಿದ್ದು, ಒಟ್ಟು 209 ಹುರಿಯಾಳುಗಳನ್ನು ಕಾಂಗ್ರೆಸ್ ಘೋಷಿಸಿದೆ. ಬಾಕಿ 15 ಕ್ಷೇತ್ರಗಳನ್ನು ಉಳಿಸಿಕೊಂಡಿದೆ.

  • ಕೋಲಾರ – ಕೊತ್ತೂರು ಮಂಜುನಾಥ್
  •  ದಾಸರಹಳ್ಳಿ- ಧನಂಜಯ
  • ಚಿಕ್ಕಪೇಟೆ – ಆರ್ ವಿ ದೇವರಾಜ್
  •  ಅಥಣಿ- ಲಕ್ಷಣ್ ಸವದಿ
  • ಕೃಷ್ಣರಾಜ – ಎಂ.ಕೆ‌ ಸೋಮಶೇಕರ್
  •  ಶಿಖಾರಿಪುರ- ಗೋಣಿ ಮಾಲ್ತೇಶ್
  •  ತೇರದಾಳ – ಸಿದ್ದು ಕೊಣ್ಣೂರರಚ
  •  ತರಿಕೆರೆ- ಶ್ರೀನಿವಾಸ್
  •   ಚಿಕ್ಕಬಳ್ಳಾಪುರ- ಪ್ರದೀಪ್ ಈಶ್ವರ್
  •  ಅರಸಿಕೆರೆ- ಶಿವಲಿಂಗೇಗೌಡ
  •  ಬೊಮ್ಮನಹಳ್ಳಿ – ಉಮಾಪತಿ ಗೌಡ
  •  ಬೆಂಗಳೂರು ದಕ್ಷಿಣ- ಆರ್ ಕೆ ರಮೇಶ
  • ಮೂಡಿಗೆರೆ- ನಯನ ಮೋಟಮ್ಮ
  • ಮದ್ದೂರು- ಉದಯ್ ಗೌಡ‘
  •  ಶಿವಮೊಗ್ಗ – ಯೋಗೇಶ್
  •  ನವಲಗುಂದ- ಕೋನರೆಡ್ಡಿ
  • ಕುಂದಗೋಳ- ಕುಸುಮಾ ಶಿವಳ್ಳಿ
  •  ಕಲಬುರಗಿ ಗ್ರಾಮೀಣ- ರೇವುನಾಯ್ಕ್ ಬೆಳಮಗಿ
  •  ಅರಭಾವಿ ಕ್ಷೇತ್ರ-ಅರವಿಂದ ದಳವಾಯಿ
  •  ರಾಯಬಾಗ ಕ್ಷೇತ್ರ-ಮಹಾವೀರ ಮೋಹಿತ್​
  • ಬೆಳಗಾವಿ ಉತ್ತರ ಕ್ಷೇತ್ರ-ಆಸೀಫ್ ಸೇಠ್​
  • ಬೆಳಗಾವಿ ದಕ್ಷಿಣ ಕ್ಷೇತ್ರ- ಪ್ರಭಾವತಿ ಮಾಸ್ತಿ ಮರಡಿ