ಕಾಂಗ್ರೆಸ್ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಡಿಲಿಟ್: ಚಿಂಚೋರೆ ಆರೋಪ

ಚಿಂಚೊರೆ
Advertisement

ಧಾರವಾಡ: ಮತದಾರರ ಪಟ್ಟಿಯಲ್ಲಿ ವ್ಯವಸ್ಥಿತವಾದ ಸಂಚು ನಡೆದಿದೆ, ಶಾಸಕ ಅರವಿಂದ ಬೆಲ್ಲದ ಮೇಲೆ ನೇರ ಆರೋಪ ಮಾಡಿದ ಪಾಲಿಕೆ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಧಾರವಾಡದಲ್ಲೂ ಜನ್ಮ ತಳಿದ ಮಿನಿ ಚಿಲುಮೆ ಸಂಸ್ಥೆ ಎಂದು ಆರೋಪ ಮಾಡಿದರು, ಬೆಲ್ಲದ ಅವರ ಕಡೆಯವರು ಮನೆ ಮನೆ ಸರ್ವೆ ಮಾಡುತ್ತಿದ್ದಾರೆ, ಕುತಂತ್ರದಿಂದ ಚುನಾವಣೆ ಮಾಡುತ್ತಿದ್ದಾರೆ ಅವರಿಗೆ ಯಾರು ಮತ ಹಾಕುವುದಿಲ್ಲವೋ ಅಂತವರ ಹೆಸರನ್ನು ಡಿಲೀಟ್ ಮಾಡಿಸುತ್ತಿದ್ದಾರೆ ಕಾಂಗ್ರೆಸ್‌ಗೆ ಮತ ಹಾಕುವವರ ಹೆಸರನ್ನು ಮತದಾರ ಪಟ್ಟಿಯಿಂದ ಡಿಲೀಟ್ ಮಾಡಿಸುತ್ತಿದ್ದಾರೆ ಜನ ಭಯಭೀತರಾಗಿ ನಮ್ಮ ಮನೆಗೆ ಬಂದಿದ್ದರು. ಧಾರವಾಡ ಪಶ್ಚಿಮ ಕ್ಷೇತ್ರದ ಎಲ್ಲ ಕಡೆ ಈ ರೀತಿ ಸರ್ವೆ ಮಾಡಿಸುತ್ತಿದ್ದಾರೆ ನಿಮಗೆ ಹಾಕದ ಮತವನ್ನು ಡಿಲೀಟ್ ಮಾಡಿಸುವ ಕೆಲಸ ಮಾಡಬೇಡಿ ಕೆಲಗೇರಿಯಲ್ಲಿ 500 ಜನರ ಮತಗಳೇ ಇಲ್ಲ. ಮುಂಚೆ ಇವರ ಮತಗಳಿದ್ದವು ಬೆಲ್ಲದ ಅವರು ಚಿಲ್ಲರೆ ರಾಜಕಾರಣ ಮಾಡಬಾರದು ವ್ಯವಸ್ಥಿತವಾದ ತಂತ್ರ ನಡೆದಿದೆ. ಮೋದಿ ಅವರಿಗೆ ಮತ ಹಾಕುತ್ತೀರಾ? ಶಾಸಕರ ಕೆಲಸ ನಿಮಗೆ ಖುಷಿ ತಂದಿದೆಯೇ? ಎಂಬ ಇತ್ಯಾದಿ ಪ್ರಶ್ನೆ ಕೇಳಲಾಗುತ್ತಿದೆ ಎಂದು ಆರೋಪಿಸಿದರು.