ಕಾಂಗ್ರೆಸ್ ತೊರೆಯುವ ನಿರ್ಧಾರ ಪ್ರಕಟಿಸಿದ ಡಾ.ದೇವರಾಜ ಪಾಟೀಲ

ಬಾಗಲಕೋಟೆ
Advertisement

ಬಾಗಲಕೋಟೆ: ಮಕ್ಕಳ ವೈದ್ಯನ್ಯಾಗಿ ಸುಳ್ಳು ಹೇಳುವ ರೂಢಿಯಿಲ್ಲ, ಎಂದಿಗೂ ಧ್ವನಿ ಏರಿಸಿ ಮಾತನಾಡಿಲ್ಲ. ನಾಲ್ಕು ಬಾರಿ ಟಿಕೆಟ್ ಕೊಟ್ಟು ಕಸಿದುಕೊಂಡಾಗಲೂ ಮೌನಗವಾಗಿದ್ದೆ ಆ ಮೌನವೇ ಶಾಪವಾಯಿತು. ರಾಜಕೀಯ ಎಂದರೆ ಸಂಘರ್ಷ ಎಂದು ಗೊತ್ತು. ಇನ್ನು ಸಂಘರ್ಷಕ್ಕೆ ಇಳಿಯುತ್ತೇನೆ. ನನಗೆ ಗೌರವ ಸಿಗದ ಪಕ್ಷದಲ್ಲಿ ಇನ್ನು ಇರಲಾರೆ..!
ಇದಿಷ್ಟು ಕಾಂಗ್ರೆಸ್ ಮುಖಂಡ ಡಾ.ದೇವರಾಜ ಪಾಟೀಲ ಅವರ ಮಾತುಗಳು. ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದ ಅವರು ಟಿಕೆಟ್ ದೊರೆಯದ ಹಿನ್ನೆಲೆಯಲ್ಲಿ ಪಕ್ಷದ ಹೈಕಮಾಂಡ್ ವಿರುದ್ಧ ಮುನಿಸಿಕೊಂಡಿರುವ ಅವರು ಶನಿವಾರ ನಗರದಲ್ಲಿ ಬೆಂಬಲಿಗರ ಸಭೆ ನಡೆಸಿದರು. ಸಭೆಯಲ್ಲಿ ಅವರ ಅಭಿಮಾನಿಗಳು ಪಕ್ಷೇತರವಾಗಿ ಸ್ಪರ್ಧಿಸಿ ಪಕ್ಷಕ್ಕೆ ಶಕ್ತಿ ತೋರಿಸಬೇಕೆಂದು ಒತ್ತಾಯಿಸಿದರು.
ಸಭೆಯಲ್ಲಿ ಮಾತನಾಡಿದ ಡಾ.ದೇವರಾಜ ಪಾಟೀಲ ಅವರು ೨೦೦೮ರಲ್ಲಿ ರಾಜಕೀಯ ಪ್ರವೇಶ ಮಾಡಿದೆ. ಎಚ್.ವೈ.ಮೇಟಿ ಸಾಹೇಬರಿಗೆ ತೊಂದರೆ ಆಗಬಾರದು ಎಂದು ಬಾದಾಮಿ ಹಾದಿ ಹಿಡಿದು ಪಕ್ಷ ಸಂಘಟನೆಯ ಕೆಲಸ ಮಾಡಿದೆ. ೨೦೧೩ರಲ್ಲಿ ಟಿಕೆಟ್ ಘೋಷಣೆ ಆಯಿತು. ಆಗ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವುದರಿಂದ ಚಿಮ್ಮನಕಟ್ಟಿ ಅವರಿಗೆ ಅವಕಾಶ ಮಾಡಿಕೊಡುವಂತೆ ಕೇಳಿದರೂ ಬಿಟ್ಟುಕೊಟ್ಟೆ. ನಂತರ ಲೋಕಸಭೆಗೂ ನಾನು ಅಭ್ಯರ್ಥಿ ಎಂದು ಘೊಷಣೆಯಾದ ಜಿಲ್ಲೆಯ ನಾಯಕರು ಯಾರಿಗೂ ಮಾತು ಕೊಟ್ಟಿದ್ದಾರೆ ಎಂದು ಹಿಂದಕ್ಕೆ ಸರಿಸಿದರು. ಕಳೆದ ೨೦೧೮ರ ಚುನಾವಣೆಯಲ್ಲಿ ಟಿಕಟೆ ಘೊಷಣೆಯಾದ ನಂತರ ಸಿದ್ದರಾಮಯ್ಯ ತಾವು ಸ್ಪರ್ಧಿಸುವುದಾಗಿ ಹೇಳಿದ್ದರಿಂದ ಬಿಟ್ಟುಕೊಟ್ಟೆ. ಅವರ ಗೆಲುವಿಗಾಗಿ ಶ್ರಮಿಸಿದೆ. ಒಂದೂ ದಿನವೂ ರೆಸಾರ್ಟ್ಗೆ ಕಾಲಿಡದೆ ಜನರ ಮಧ್ಯೆ ಕೆಲಸ ಮಾಡಿದೆ. ಅಂಚೆ ಪೆಟ್ಟಿಗೆ ಮತದಾನದಲ್ಲಿ ನಡೆಸುತ್ತಿದ್ದ ಗೋಲ್ಮಾಲ್ ತಡೆಯದಿದ್ದರೆ ಸಿದ್ದರಾಮಯ್ಯ ಅವರು ಸೋಲುತ್ತಿದ್ದರು. ಕೆರೂರಿನಲ್ಲಿ ನೇಕಾರರು ಕಾಂಗ್ರೆಸ್ ಬೆಂಬಲಿಸುವAತೆ ಮಾಡಿದೆ ಆದರೆ ಅವರೇ ನನ್ನನ್ನು ಮರೆತರು. ಅವರ ವಾಹನದಲ್ಲಿ ತೆರಳುವಾಗ ಚಿಮ್ಮನಕಟ್ಟಿ ತಪ್ಪು ಭಾವಿಸುತ್ತಾರೆ ಎಂದು ವಾಹನದಿಂದ ಇಳಿಸಿದರು. ವೇದಿಕೆಗಳಲ್ಲಿ ನನ್ನ ಹೆಸರು ಪಸ್ರಾö್ತಪಿಸುವುದನ್ನೂ ನಿಲ್ಲಿಸಿದಾಗ ಬಾದಾಮಿ ಸಹವಾಸವೇ ಬೇಡ ಎಂದು ಬಿಟ್ಟೆ.
ಈ ಬಾರಿಯೂ ನನ್ನ ಹೆಸರು ಮುಂಚೂಣಿಯಲ್ಲಿತ್ತು. ಎಐಸಿಸಿ, ಕೆಪಿಸಿಸಿ ಅಧ್ಯಕ್ಷರು, ಮೇಲ್ಮನೆ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಆದಿಯಾಗಿ ಎಲ್ಲರೂ ನನ್ನ ಹೆಸರು ಸೂಚಿಸಿದರು. ಸಿದ್ದರಾಮಯ್ಯ ಅವರ ಗೆಲುವಿಗೆ ಅಷ್ಟು ಶ್ರಮಿಸಿದರೂ ಅವರೇ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೂ ಅವರಿಗೆ ಒಳ್ಳೆಯದಾಗಲಿ ಎಂದು ನಾನು ಬಯಸುತ್ತೇನೆ ಎಂದು ಹೇಳಿದರು.
ಈಗಲೂ ಟಿಕೆಟ್ ಸಿಕ್ಕಿಲ್ಲ ಎಂದು ಮೌನವಾಗಿದ್ದರೆ ನನ್ನ ಮಹತ್ವ ಇವರಿಗೆ ಅರ್ಥವಾಗುವುದಿಲ್ಲ. ರಾಜಕೀಯ ಎಂಬುದೇ ಸಂಘರ್ಷ. ಹೀಗಾಗಿ ನನ್ನ ಶಕ್ತಿಯನ್ನು ತೋರಿಸುವ ಕೆಲಸವನ್ನು ಮಾಡುವುದು ಅನಿವಾರ್ಯವಾಗಿದೆ. ಪಕ್ಷದ ಕಾರ್ಯಕರ್ತರು ನನ್ನ ಮಾಲೀಕರಿದ್ದಂತೆ ಅವರ ಅಭಿಪ್ರಾಯ ಪಡೆದು ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನನ್ನ ತೀರ್ಮಾನ ಪ್ರಕಟಿಸುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ಪ್ರಾಮಾಣಿಕರು, ಕಲಿತವರು ಬೇಡವಾಗಿದ್ದಾರೆ. ಪ್ರತಿ ಬಾರಿ ಟಿಕೆಟ್ ಘೋಷಿಸಿ ಅವಮಾನಿಸುವುದು ನನ್ನ ಸೌಮ್ಯ ಸ್ವಭಾವನ್ನು ನೋಡಿ. ಆದರೆ ರಾಜಕೀಯ ಸಂಘರ್ಷಕ್ಕೆ ಹೆದರಿ ಕೂರುವ ವ್ಯಕ್ತಿ ನಾನಲ್ಲ ಎಂದರು.
ಜಿಪಂ ಮಾಜಿ ಅಧ್ಯಕ್ಷ ಬಸವಂತಪ್ಪ ಮೇಟಿ ಅವರು ಮಾತನಾಡಿ, ಡಾ.ದೇವರಾಜ ಪಾಟೀಲ ಅವರು ನನಗೆ ಮಾವನಾಗಬೇಕು, ಎಚ್.ವೈ.ಮೇಟಿ ಅವರು ನನಗೆ ಅಜ್ಜನವರಾಗಬೇಕು. ನನಗೆ ಈಗ ಸಂಕಷ್ಟದ ಸ್ಥಿತಿ. ಯಾವುದೇ ಆತುರದ ನಿರ್ಧಾರ ಪ್ರಕಟಿಸುವುದು ಬೇಡ. ಹಿರಿಯರೊಂದಿಗೆ ಚರ್ಚಿಸ ತೀರ್ಮಾನಿಸುವುದು ಸೂಕ್ತ ಎಂದು ಸಲಹೆ ನೀಡಿದರು.
ದೇವರಾಜ ಪಾಟೀಲ ಅವರ ಬೆಂಬಲಿಗರಾದ ವೈ.ಎಚ್.ಇದ್ದಲಗಿ, ಸಂಗಮೇಶ ಗೌಡರ, ತೋಹಿದ ಅಲಿ ಸಂತಿಶಿರೂರ ಅವರುಗಳು ಮಾತನಾಡಿ, ನಾಲ್ಕು ಬಾರಿ ಡಾ.ದೇವರಾಜ ಪಾಟೀಲ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಅನ್ಯಾಯ ಮಾಡಿದೆ. ಈ ಬಾರಿ ಅವರು ಪಕ್ಷೇತರವಾಗಿ ಸ್ಪರ್ಧಿಸಬೇಕು. ಇಂಥ ಸುಶಿಕ್ಷಿತ, ಪ್ರಾಮಾಣಿಕರನ್ನು ಪಕ್ಷ ನಿರ್ಲಕ್ಷಿಸುವುದು ಸರಿಯಲ್ಲ ಎಂದರು.
ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಡಿ.ಬಿ.ಸಿದ್ದಾಪುರ, ಕಾಂಗ್ರೆಸ್ ಮುಖಂಡರಾದ ಅಜೀಜ್ ಬಾಳಿಕಾಯಿ, ರಜಾಕ ಹಳ್ಳೂರ ಮತ್ತಿತರರು ಇದ್ದರು.