ಕಾಂಗ್ರೆಸ್ ಜೋಡೋ ಯಾತ್ರೆಗೇಕೆ ಭಾರತ ಜೋಡೋ ಎಂದು ಕರೆದಿದ್ದೀರಿ? ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಪಕ್ಷವನ್ನೇ ನಿಮ್ಮಿಂದ ಜೋಡಿಸಲಾಗುತ್ತಿಲ್ಲ. ಕರ್ನಾಟಕದಲ್ಲಿ ನಿಮ್ಮ ಪಕ್ಷದ ಡಿ.ಕೆ. ಶಿವಕುಮಾರ್-ಸಿದ್ದರಾಮಯ್ಯ ಅವರನ್ನು ಜೋಡಿಸಲಾಗದ ನಿಮಗೆ ಭಾರತವನ್ನು ಜೋಡಿಸಲು ಸಾಧ್ಯವೇ? ನೀವು ಕರ್ನಾಟಕದ ಕಾಂಗ್ರೆಸನ್ನು ಜೋಡಿಸಬಲ್ಲಿರಾ? ನಿಮ್ಮದು “ಒಳಗೆ ಭಾರತ ತೋಡೋ ಹೊರಗೆ ಭಾರತ ಜೋಡೋ ಒಳಗೆ ಭ್ರಷ್ಟಚಾರದ ಪರ ಹೊರಗೆ ಭ್ರಷ್ಟಚಾರ ವಿರೋಧಿ” ಇಂತಹ ಆತ್ಮ ವಂಚನೆ ನಿಮಗೇಕೆ? ಎಂದಿದ್ದಾರೆ. ಅಲ್ಲದೆ ಭಾರತೀಯರು ಕಾಂಗ್ರೆಸ್ ಮುಕ್ತ ಭಾರತವನ್ನು ಬಯಸುತ್ತಿದ್ದಾರೆ ಎಂದು ರವಿಕುಮಾರ ಹೇಳಿದರು.