ಹುಬ್ಬಳ್ಳಿ: ಕಾಂಗ್ರೆಸ್‌ನವರು ಬಜೆಟ್ ಮಂಡನೆ ಕಿವಿಯಲ್ಲಿ ಹೂವಿಟ್ಟುಕೊಂಡು ಸದನಕ್ಕೆ ಬಂದಿದ್ದಾರೆ. ಇನ್ನು ಮುಂದೆ ಕಿವಿಯಲ್ಲಿ ಹೂವಿಟ್ಟುಕೊಂಡೇ ಕಾಂಗ್ರೆಸ್‌ನವರು ಓಡಾಡ ಬೇಕಾಗುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವ್ಯಂಗ್ಯವಾಡಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಜನರು ತಿರಸ್ಕಾರ ಮಾಡಿದ್ದಾರೆ. ಎಲ್ಲ ಕಡೆ ಜನ ಈಗಾಗಲೇ ಕಾಂಗ್ರೆಸ್‌ಗೆ ಹೂವಿಟ್ಟಿದ್ದಾರೆ. ಇನ್ನು ಮುಂದು ತಾವಾಗಿಯೇ ಹೂವಿಟ್ಟುಕೊಂಡು ಓಡಾಡೋ ಪರಿಸ್ಥಿತಿ ನಿರ್ಮಾಣವಾಗಿದೆ. ನೆಹರೂ ನಿಧನದ ನಂತರ ಅವರ ಹೆಸರಲ್ಲಿ ಇಂದಿರಾಗಾಂಧಿ ಅಧಿಕಾರಕ್ಕೆ ಬಂದರು. ಇಂದಿರಾಗಾಂಧಿ ಸಾವಿನ ನಂತರ ಅವರ ಹೆಸರಲ್ಲಿ ಗದ್ದುಗೆ ಹಿಡಿದರು. ಸ್ವಂತ ಶಕ್ತಿಯ ಮೇಲೆ ಎಂದೂ ಕಾಂಗ್ರೆಸ್ ಅಧಿಕಾರಕ್ಕೆ ಬಂದಿಲ್ಲ. ಇದೀಗ ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಂಡು ಪರಿತಪಿಸುತ್ತಾ ಹೀಗೆ ಮಾಡ್ತಿದೆ. ಕಾಂಗ್ರೆಸ್ ಪಕ್ಷವನ್ನು ದುರ್ಬಿನ ಹಾಕಿಕೊಂಡು ಹುಡುಕುವ ಪರಿಸ್ಥಿತಿ ಬಂದಿದೆ ಎಂದು ಕಿಡಿಕಾರಿದರು.