ಕಲ್ಲು ಕ್ವಾರಿಯಲ್ಲಿ ಮುಳುಗಿ ಯವಕ ಸಾವು

Advertisement

ಹುಬ್ಬಳ್ಳಿ:ತಾಲೂಕಿನ ಕುಸುಗಲ್ ಗ್ರಾಮದಲ್ಲಿ ಕಲ್ಲಿನ ಕ್ವಾರಿಯಲ್ಲಿ ಈಜಲು ಹೋದ ಯುವಕ ನೀರು ಪಾಲದ ಘಟನೆ ಗುರುವಾರ ನಡೆದಿದೆ.
ಸಾಗರ ದೂಳಪ್ಪನವರ(೧೭) ಮೃತ ಯುವಕ. ಮುಂಜಾನೆ ಬೈಕ್ ತೊಳೆಯಲು ತನ್ನ ಸ್ನೇಹಿತರೊಂದಿಗೆ ಕ್ವಾರಿಗೆ ಹೋದ ಸಂದರ್ಭದಲ್ಲಿ ಬೈಕ್ ತೊಳೆದು ನಂತರ ಈಜಲು ಹೋಗಿದ್ದು, ನೀರಿನಲ್ಲಿ ಮುಳುಗಿದ್ದಾನೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.