ಬೆಂಗಳೂರು: ಇಲ್ಲಿನ ಪಾರಿಜಾತ ನಿವಾಸದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಸುದ್ದಿಗೋಷ್ಠಿ ನಡೆಸಿ, ಕಾಯಕವೇ ಕೈಲಾಸ ಎಂದು ನಂಬಿದವನು ನಾನು. ಕೆಲಸವನ್ನು ನಂಬಿಕೊಂಡು ಇಲ್ಲಿಯವರೆಗೆ ನಾನು ಬಂದಿದ್ದೇನೆ ಎಂದರು. ಇಂದು ಹೊಸ ರಾಜಕೀಯ ಪಕ್ಷ ಸ್ಥಾಪನೆಯ ವಿಚಾರವನ್ನು ಅವರು ಬಹಿರಂಗಪಡಿಸಿದ್ದು, ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಎಂದು ಘೋಷಿಸಿದ್ದಾರೆ.