ಕಲಾವಿದ ಬಿಕೆಎಸ್ ವರ್ಮಾ ನಿಧನ

Advertisement

ಬೆಂಗಳೂರು: ಹಿರಿಯ ಚಿತ್ರಕಲಾವಿದ ಬಿ.ಕೆ.ಎಸ್ ವರ್ಮಾ ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಣಿಪಾಲ್ ಆಸ್ಪತ್ರೆಯಲ್ಲಿ ಕಳೆದ ಮೂರು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಹೆಬ್ಬಾಳದಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಬಿ.ಕೆ.ಎಸ್ ವರ್ಮಾ ಅವರಿಗೆ 76 ವರ್ಷ ವಯಸ್ಸಾಗಿತ್ತು. ಬಿ.ಕೆ.ಎಸ್ ವರ್ಮಾ ಅವರು ಅತ್ತಿಬೆಲೆ ತಾಲೂಕಿನ ಕರ್ನೂರಿನಲ್ಲಿ 1949 ರಲ್ಲಿ ಜನಿಸಿದ್ದರು. ಬೆಂಗಳೂರು ವಿವಿಯು ಇವರಿಗೆ 2011 ರಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. ಪರಿಸರ ಹಾಗೂ ಸಾಮಾಜಿಕ ಸಮಸ್ಯೆಗಳ ಬಗ್ಗೆ ಚಿತ್ರ ಬರೆಯುತ್ತಿದ್ದ ಅವರು, ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ರಾಜಾ ರವಿವರ್ಮಾ ಅವರ ಚಿತ್ರಕಲೆಗಳನ್ನು ನೋಡಿತ್ತಿದ್ದಾಗ ಮನಸೋತು, ತಮ್ಮ ಹೆಸರಿನೊಂದಿಗೆ ವರ್ಮಾ ಎಂದು ಜೋಡಿಸಿಕೊಂಡಿದ್ದರು. 1986ರಲ್ಲಿ ಮೊದಲ ಬಾರಿಗೆ ಬಿಕೆಎಸ್ ವರ್ಮಾ ರಚನೆ ಮಾಡಿದ ಏಕವ್ಯಕ್ತಿ ಕಲಾಕೃತಿಗಳ ಪ್ರದರ್ಶನ ನಡೆದಿತ್ತು. ರವಿವರ್ಮನ ಕಲಾಕೃತಿಗಳಿಂದ ಪ್ರೇರಣೆ ಪಡೆದು ಬಿಕೆಎಸ್‌ ವರ್ಮಾ ತೈಲವರ್ಣದ ಚಿತ್ರವನ್ನು ಬಿಡಿಸುತ್ತಿದ್ದರು.

ಬಿಕೆಎಸ್ ವರ್ಮಾ ಅವರ ಕುಂಚದಲ್ಲಿ ಅರಳಿದ ಕನ್ನಡಾಂಬೆ ಭುವನೇಶ್ವರಿ