ಕಲಬುರಗಿ ಜಿಲ್ಲೆಗೆ ಪಂಚರತ್ನ ರಥಯಾತ್ರೆ

Advertisement

ಕಲಬುರಗಿ: ಜೆಡಿಎಸ್ ಪಂಚರತ್ನ ರಥಯಾತ್ರೆ ಕಲಬುರಗಿ ಜಿಲ್ಲೆಗೆ ಇಂದು ಆಗಮಿಸಿತು.
ಆಳಂದ ತಾಲ್ಲೂಕಿನ ಖಜೂರಿ ಮೂಲಕ ಕಲಬುರಗಿ ಜಿಲ್ಲೆಗೆ ಪ್ರವೇಶ ಮಾಡಿದ ರಥಯಾತ್ರೆಗೆ ತೊಗರಿ ಹಾರದ ಮೂಲಕ ಕಾರ್ಯಕರ್ತರು ಸ್ವಾಗತಿಸಿದರು.
ಆಳಂದ ಕ್ಷೇತ್ರದ ಘೋಷಿತ ಜೆಡಿಎಸ್ ಅಭ್ಯರ್ಥಿ ಮಹೇಶ್ವರಿ ವಾಲಿ ಸೇರಿದಂತೆ ಜಿಲ್ಲೆಯ ಎಲ್ಲ ೪ ಘೋಷಿತ ಅಭ್ಯರ್ಥಿಗಳು ಹಾಜರಿದ್ದರು.
ಖಜೂರಿ ಬಸ್ ನಿಲ್ದಾಣದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ ಕುಮಾರಸ್ವಾಮಿ, ಕೆಲವರ ಕಪಿಮುಷ್ಟಿಯಲ್ಲಿ ಖಜೂರಿ ರಾಜಕಾರಣ ಇದೆ. ಅದರಿಂದ ಖಜೂರಿಯನ್ನು ಮುಕ್ತಗೊಳಿಸಬೇಕು ಎಂದರು. ಕಲಬುರ್ಗಿ ಜಿಲ್ಲೆಯಲ್ಲಿ ಅನೇಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆಗೆ ಶರಣಾಗಬಾರದು. ನಮ್ಮ ಸರಕಾರ ಬರುತ್ತೆ, ನಿಮ್ಮ ನೆರವಿಗೆ ನಾನಿದ್ದೇನೆ. ಯಾವುದೇ ಕಾರಣಕ್ಕೂ ನಿಮ್ಮನ್ನು ಕಷ್ಟಕ್ಕೆ ದೂಡಲು ಬಿಡುವುದಿಲ್ಲ ಎಂದು ರೈತರಿಗೆ ಅಭಯ ನೀಡಿದರು.
ಪಂಚರತ್ನ ಯೋಜನೆಗಳು ಈ ರಾಜ್ಯದ ದಿಕ್ಕನ್ನು ಬದಲಿಸುತ್ತವೆ. ನಾನು ರೈತರ 25 ಸಾವಿರ ಕೋಟಿ ಸಾಲ ಮನ್ನಾ ಮಾಡಿದೆ. ಆದರೆ ಬಿಜೆಪಿ ಸರಕಾರ ಸುಮಾರು 7 ಸಾವಿರ ಕೋಟಿ ಹಣವನ್ನು ಬೇರೆ ಕಡೆಗೆ ಡೈವರ್ಟ್ ಮಾಡಿದರು.ಇನ್ನೂ ಸಾವಿರಾರು ರೈತರಿಗೆ ಸಾಲ ಮನ್ನಾ ಆಗಿಲ್ಲ. ನನ್ನ ಸರಕಾರ ಬಂದರೆ ಇವರ ಸಾಲ ಮನ್ನಾ ಮಾಡುವೆ ಎಂದು ಹೇಳಿದರು.