ಕಲಬುರಗಿ: ಮೆಗಾ ಜವಳಿ ಪಾರ್ಕ್‌ನ್ನು ಕೇಂದ್ರ ಸರ್ಕಾರ ಕಲಬುರಗಿಗೆ ಮಂಜೂರು ಮಾಡಿದೆ ಎಂದು ಸಂಸದ ಡಾ. ಉಮೇಶ ಜಾಧವ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ ಬಳಿಕ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಂಸದ ಡಾ. ಉಮೇಶ ಜಾಧವ, ಇಂದು ನಮ್ಮ ಪ್ರಧಾನಿಯವರು ದೇಶದಲ್ಲಿ ಏಳು ಜವಳಿ ಪಾರ್ಕ್ ಘೋಷಣೆ ಮಾಡಿದ್ದಾರೆ. ಅದರಲ್ಲಿ ಕಲಬುರಗಿ ಕೂಡಾ ಒಂದಾಗಿದೆ. ಅದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತುಂಬು ಹೃದಯದ ಧನ್ಯವಾದಗಳು ಸಲ್ಲಿಸುತ್ತೇನೆ. ಈ ಬೃಹತ್ ಜವಳಿ ಪಾರ್ಕ್ ಈ ಭಾಗದ ಹತ್ತಿ ಬೆಳೆಯುವ ರೈತರು, ಯುವಕರು ಹಾಗೂ ಜವಳಿ ಉದ್ಯಮಿಗಳ ಪಾಲಿಗೆ ಒಂದು ವರದಾನ ಆಗಲಿದೆ ಎಂದಿದ್ದಾರೆ.