ಹಾವೇರಿ: ಶಿಗ್ಗಾವಿ ಸಮೀಪದ ಗೊಟಗೋಡಿ ಸಮೀಪದಲ್ಲಿರುವ ಕರ್ನಾಟಕ ಜಾನಪದ ವಿಶ್ವ ವಿದ್ಯಾಲಯದ ಘಟಿಕೋತ್ಸವಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿಡಿಯೋ ಕಾನ್ಪರೇನ್ಸ್ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮ ನಿರ್ವಹಣೆಯಲ್ಲಿ ಯಡವಟ್ಟು ಆಗಿದ್ದರಿಂದ ವಿವಿ ಕುಲಪತಿಗಳನ್ನು ರಾಜ್ಯಪಾಲರು ತರಾಟೆಗೆ ತೆಗೆದುಕೊಂಡ ಪ್ರಸಂಗ ಜರುಗಿತು. ಏಕೆ ಶಿಷ್ಟಾಚಾರ ಪಾಲಿಸುತ್ತಿಲ್ಲ ಎಂದು ರಾಜ್ಯಪಾಲರು ಗರಂ ಆದರು. ಘಟಿಕೋತ್ಸವ ಕಾರ್ಯಕ್ರಮ ನಿರ್ವಹಣೆಯ ಶಿಷ್ಟಾಚಾರ ಪಾಲಿಸುವಂತೆ ರಾಜ್ಯಪಾಲರು ಸೂಚಿಸಿದರು. ದೂರವಾಣಿ ಕರೆಯಲ್ಲಿ ತಪ್ಪಾಯ್ತು ಎಂದ ಕುಲಪತಿ ಟಿ. ಎಂ. ಭಾಸ್ಕರ, ಎರಡು ಸಲ ಘಟಿಕೋತ್ಸವಕ್ಕೆ ಚಾಲನೆ ನೀಡಿದ ರಾಜ್ಯಪಾಲರು ಎರಡು ಸಲ ರಾಷ್ಟ್ರಗೀತೆ ಹಾಡಿದ ಪೊಲೀಸ್ ಬ್ಯಾಂಡ್ ಸಿಬ್ಬಂದಿ ಎರಡೆರಡು ಸಲ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ವಿತರಣೆ ಕಾರ್ಯಕ್ರಮ ನಿರ್ವಹಣೆಯಲ್ಲಿ ಅಸ್ತವ್ಯಸ್ತತೆ ಬಳಿಕ ರಾಜಭವನದ ಕಚೇರಿಯ ಸೂಚನೆಯಂತೆ ಕಾರ್ಯಕ್ರಮ ನಿರ್ವಹಣೆ ದೂರವಾಣಿಯಲ್ಲಿ ಸಹಾಯಕ ಕುಲಸಚಿವ ಮುದಕವಿಗೆ ಸೂಚನೆ ನೀಡಿದ ರಾಜಭವನದ ಸಿಬ್ಬಂದಿ.