ಕರ್ನಾಟಕದ ಹಣದಿಂದ ತೆಲಂಗಾಣದಲ್ಲಿ ಗೆಲುವು

ಎಚ್.ಡಿ. ಕುಮಾರಸ್ವಾಮಿ
Advertisement

ಬೆಂಗಳೂರು: ಕರ್ನಾಟಕದ ಹಣದಿಂದ ಕಾಂಗ್ರೆಸ್‌ ತೆಲಂಗಾಣದಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.​ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ತೆಲಂಗಾಣ ವಿಧಾನಸಭೆ ಚುನಾವಣೆಯ ಫಲಿತಾಂಶದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಬಹುಮತ ಖಚಿತವಾಗುತ್ತಿರುವ ಸಂದರ್ಭದಲ್ಲಿ ಮಾತನಾಡಿರುವ ಅವರು, ತೆಲಂಗಾಣ ರಾಜ್ಯ ನಾಯಕರು ಮಾಡಿರುವ ಚುನಾವಣೆ ಪ್ರಚಾರದಿಂದ ಅವರು ಗೆದ್ದಿಲ್ಲ. ಬದಲಾಗಿ ಕರ್ನಾಟಕ ರಾಜ್ಯದಿಂದ ರವಾನೆಯಾದ ಹಣದಿಂದ ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ ಎಂದು ಆರೋಪಿಸಿದ್ದಾರೆ.