ಪಣಜಿ: ಭಾನುವಾರ ಮನ್ ಕಿ ಬಾತ್ ಕಾರ್ಯಕ್ರಮದ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಗೋವಾ ಜಾರಿಗೆ ತಂದಿರುವ ಕರಾವಳಿ ಸ್ವಚ್ಛತಾ ಅಭಿಯಾನವನ್ನು ಶ್ಲಾಘಿಸಿದರು.
‘ಸ್ವಚ್ಛ ಮತ್ತು ಸುರಕ್ಷಿತ ಸಮುದ್ರ’ ಅಭಿಯಾನವು ಮಾನವರು ಮತ್ತು ಜಲಚರಗಳೆರಡಕ್ಕೂ ಮುಖ್ಯವಾಗಿದೆ ಎಂದು ಸಂವಾದದಲ್ಲಿ ಪ್ರಸ್ತಾಪಿಸಿದರು. ಕಡಲತೀರದ ಕಸ ಮತ್ತು ಮಾಲಿನ್ಯವು ನಮ್ಮೆಲ್ಲರ ಸಮಸ್ಯೆಯಾಗಿದೆ. ನಾವೆಲ್ಲರೂ ಈ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡಬೇಕಾಗಿದೆ.” ಎಂದರು.
“ಇದಕ್ಕಾಗಿ ನಾನು ಸ್ವಚ್ಛ ಸಾಗರ್, ಸುರಕ್ಷಿತ ಸಾಗರ್ ಅಭಿಯಾನದ ಬಗ್ಗೆ ಮಾತನಾಡಲು ಬಯಸುತ್ತೇನೆ. ಕರಾವಳಿ ಸ್ವಚ್ಛತಾ ಅಭಿಯಾನವು ಜುಲೈ ೫ ರಂದು ಪ್ರಾರಂಭವಾಯಿತು ಮತ್ತು ಸೆಪ್ಟೆಂಬರ್ ೧೭ ರಂದು ಮುಕ್ತಾಯವಾಯಿತು. ಈ ದಿನ ಕರಾವಳಿ ಸ್ವಚ್ಛತಾ ದಿನವನ್ನು ಸಹ ಆಚರಿಸಲಾಗುತ್ತದೆ. ಗೋವಾದ ಐದು ಕಡಲತೀರಗಳನ್ನು ಸರ್ಕಾರವು ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತಾ ಕಾರ್ಯಾಚರಣೆಯ ಭಾಗವಾಗಿ ಆಯ್ಕೆ ಮಾಡಿದೆ. ಮಿರಾಮರ್, ಬೈನಾ, ಕೊಲ್ವಾ, ಬೊಗ್ಮಾಲೊ ಮತ್ತು ವೆಲ್ಸಾವೊ ಈ ಬೀಚ್‌ಗಳು ಸ್ವಚ್ಛತಾ ಅಭಿಯಾನದ ಭಾಗವಾಗಿತ್ತು. ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಮಿರಾಮಾರ್ ಬೀಚ್‌ಗೆ ತೆರಳಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು. ಈ ವೇಳೆ ಬೃಹತ್ ಮಾನವ ಸರಪಳಿ ನಿರ್ಮಿಸಲಾಯಿತು.