ಹಾವೇರಿ: ಕನ್ನಡ ಭಾಷೆಗೆ ಆಪತ್ತಿಲ್ಲ. ಈ ಭಾಷೆಗೆ ಆಪತ್ತು ತರುವ ಶಕ್ತಿ ಹುಟ್ಟಿಲ್ಲ. ಸೂರ್ಯ ಚಂದ್ರ ಇರುವವರೆಗೂ ಬೆಳಗುತ್ತಿರುತ್ತದೆ. ಬೆಳೆಯುತ್ತಿರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ದಾಸರು, ವಚನಕಾರರು, ಶರಣರು ಬೆಳೆಸಿದ ಭಾಷೆ ಇದು. ಕನ್ನಡ ಯಾವತ್ತಿಗೂ ಬಡವಾಗಲ್ಲ. ಅದು ಸದಾ ಶ್ರೀಮಂತವಾಗಿರುತ್ತದೆ. ಕನ್ನಡ ಶಾಲೆ ಉಳಿಸಲು, ಗಡಿಯಲ್ಲಿ ಕನ್ನಡ ಭಾಷಿಕರ ರಕ್ಷಣೆ, ಹೊರ ನಾಡ ಕನ್ನಡಿಗರ ರಕ್ಷಣೆಗೆ ಸರ್ಕಾರ ಸದಾ ಸಿದ್ಧವಿದೆ ಎಂದರು.
ಕನ್ನಡ ಸಮ್ಮೇಳನ ಕನ್ನಡಿಗರ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿಸುವ ವೇದಿಕೆಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಸಮಗ್ರ ಭಾಷಾ ಅಭಿವೃದ್ಧಿ ವಿಧೇಯಕ ಶೀಘ್ರ ಜಾರಿ:
ಸಮಗ್ರ ಭಾಷಾ ಅಭಿವೃದ್ಧಿ ವಿಧೇಯಕವನ್ನು ಶೀಘ್ರ ಜಾರಿ