ಕತಾರ್‌ನ ದೋಹಾ ವಿಮಾನ ನಿಲ್ದಾಣದಲ್ಲಿ ಡಾಲರ್ನಂತೆಯೇ ಭಾರತೀಯ ಕರೆನ್ಸಿಯನ್ನು ಬಳಸಿ ಶಾಪಿಂಗ್ ಮಾಡಬಹುದು. ನಮ್ಮ ಹಣವನ್ನು ವಿದೇಶದಲ್ಲಿ ಡಾಲರ್‌ನಂತೆ ಬಳಸಲು ನಮಗೆ ಅನುವು ಮಾಡಿಕೊಟ್ಟಿದ್ದಕ್ಕಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಂದನೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿ ಪ್ರಧಾನಿಗೆ ಸೆಲ್ಯೂಟ್ ಮಾಡಿರುವ ಬಾಲಿವುಡ್ ಗಾಯಕ ಮಿಕಾ ಸಿಂಗ್ ಅವರ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಸ್ವತಃ ಮಿಕಾ ಸಿಂಗ್ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದು, ಜೊತೆಗೆ ಪ್ರಧಾನಿಯವರನ್ನೂ ಟ್ಯಾಗ್ ಮಾಡಲಾಗಿದೆ.