ಹುಬ್ಬಳ್ಳಿ: ಅಪರೂಪದಲ್ಲಿ ಅಪರೂಪದ ಹೃದ್ಯ- ಸಂತಸಕರ- ಅನನ್ಯ ವಿದ್ಯಮಾನವಿದು. ವಯಸ್ಸು- ಅಂತಸ್ತು- ಅಧಿಕಾರ ಮರೆತು ಎಲ್ಲರೂ ಖುಷಿಯಿಂದ ಕುಣಿದು ಕುಪ್ಪಳಿಸಿದ ಕ್ಷಣವಿದು. ಆಗಿದ್ದು ಇಷ್ಟು. ದೆಹಲಿಯಿಂದ ಹುಬ್ಬಳ್ಳಿಗೆ ಹೊರಟಿದ್ದ ಗರ್ಬಿಣಿಯೊಬ್ಬರಿಗೆ ಅಲ್ಲಿನ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಬೆಳಿಗ್ಗೆ ಹೆರಿಗೆಯಾಗಿ, ಗಂಡು ಮಗು ಜನಿಸಿತು.
ಭಾರತದ ವಿಮಾನ ನಿಲ್ದಾಣಗಳ ಇತಿಹಾಸದಲ್ಲಿ ಇದು ವಿಶಿಷ್ಟ ಘಟನೆ. ಬದುಕಿನ ಮೊದಲ ದಿನವೇ ಅತೀ ಕಿರಿಯ `ಬಾಳ ಪ್ರಯಾಣಿಕ’ನೋರ್ವ ವಿಮಾನ ನಿಲ್ದಾಣದಲ್ಲಿ ಚೆಕ್ ಇನ್ ಮಾಡಿದ ಅತ್ಯಪರೂಪದ ದಿನ. ಹಾಗೆಯೇ ದೆಹಲಿ ವಿಮಾನ ನಿಲ್ದಾಣದಲ್ಲಿ ಆದ ಮೊದಲ ಹೆರಿಗೆ ಪ್ರಕರಣ.