ಒಂದೇ ಕ್ಷೇತ್ರದಿಂದ ಸ್ಪರ್ಧೆ: ಸಿದ್ದರಾಮಯ್ಯ

Advertisement

ಬಾಗಲಕೋಟೆ: ಓಡಾಡಲು ದೂರವಾದ ಕಾರಣ ಬಾದಾಮಿ ಬದಲು ಕೋಲಾರ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಈ ಬಾರಿ ಏನಿದ್ದರೂ ಒಂದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ.
ಬುಧವಾರ ಪ್ರಜಾಧ್ವನಿ ಯಾತ್ರೆಯಲ್ಲಿ ಭಾಗಿಯಾಗುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಲಾರದ ಜನ ಪ್ರೀತಿಯಿಂದ ಕರೆಯುತ್ತಿದ್ದು, ಅಲ್ಲಿ ನಿಲ್ಲುವ ತೀರ್ಮಾನ ಪ್ರಕಟಿಸಿದ್ದೇನೆ. ಹೈಕಮಾಂಡ್ ಸೂಚಿಸಿದ ಕಡೆ ನನ್ನ ಸ್ಪರ್ಧೆ ಎಂದರು.
ಸಿದ್ದರಾಮಯ್ಯ ಅವರು ಅಲೆಮಾರಿ, ಕ್ಷೇತ್ರ ಹುಡಕಾಟದ ಬಗ್ಗೆ ವಿಪಕ್ಷಗಳ ಟೀಕೆಗೆ ಉತ್ತರಿಸಿದ ಅವರು ಪ್ರಧಾನಿ ಮೋದಿ ಎರಡು ಕಡೆ ಸ್ಪರ್ಧಿಸಿದರೆ ಜನಪ್ರಿಯತೆ ಎನ್ನುತ್ತೀರಿ; ಸಿದ್ದರಾಮಯ್ಯ ಸ್ಪರ್ಧಿಸಿದರೆ ಸೋಲಿನ ಭೀತಿ ಎನ್ನುತ್ತೀರಿ. ಚಾಮುಂಡಿ ಕ್ಷೇತ್ರದಲ್ಲಿ ಅನೇಕ ಬಾರಿ ಗೆದ್ದಿದ್ದೇನೆ. ಕೊಪ್ಪಳದಲ್ಲಿ ಹಿಂದೆ ಸ್ಪರ್ಧಿಸಿದ ಸಮಯದಲ್ಲಿ ರಾಜೀವ ಗಾಂಧಿ ಹತ್ಯೆ ಆಗಿತ್ತು, ಅದಕ್ಕಾಗಿ ಸೋತಿದ್ದೆ. ಬಾದಾಮಿಯಲ್ಲಿ ನಾನು ಸ್ಪರ್ಧಿಸಿದೆ ಎಂಬ ಕಾರಣಕ್ಕಾಗಿಯೇ ಬಿಜೆಪಿ ಅವರು ರಾಮುಲುನನ್ನು ಕಣಕ್ಕಿಳಿಸಿದರು. ಆದರೂ ನಾನು ಗೆಲವು ಸಾಧಿಸಲಿಲ್ಲವೇ ಎಂದು ಪ್ರಶ್ನಿಸಿದರು.