ಒಂಟೆ ಸಾಗಣೆ: ಓರ್ವನ ಬಂಧನ

ಒಂಟೆ
Advertisement

ಬೀದರ್‌: ನೌಬಾದ್ ಬಳಿ ಅಕ್ರಮವಾಗಿ ಒಂಟೆ ಸಾಗಣೆ ಮಾಡುತ್ತಿದ್ದ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಬಸವಕಲ್ಯಾಣದ ಮುಜಾಮಿಲ್ ಬಂಧಿತ ಆರೋಪಿ. ಅಕ್ರಮವಾಗಿ ಒಂಟೆ ಸಾಗಿಸುವಾಗ ನೂತನ ನಗರ ಠಾಣೆ ಪೊಲೀಸರು ದಾಳಿ ನಡೆಸಿ ಎರಡು ಒಂಟೆ ಹಾಗೂ ಟೆಂಪೋ ಜಪ್ತಿ ಮಾಡಿ ಆರೋಪಿ ಸೇರಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.