ಹುಬ್ಬಳ್ಳಿ: ದೇಶದಲ್ಲಿ ಕಾಂಗ್ರೆಸ್ ಅಂತ್ಯದ ಹಾದಿ ಹಿಡಿದಿದೆ. ಕರ್ನಾಟಕದಲ್ಲಿ ಐಸಿಯುನಲ್ಲಿದ್ದು, ಶೀಘ್ರ ಅಂತ್ಯವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ ಶೆಟ್ಟರ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆ ಸಮೀಪಿಸುತ್ತಿರುವುದರಿಂದ ಅರ್ಥವಿಲ್ಲದ ಆರೋಪ ಮಾಡುತ್ತಿದೆ. ಸುಳ್ಳು ಆರೋಪ ಮಾಡುತ್ತಿರುವ ಕಾಂಗ್ರೆಸ್ ನಾಯಕರು ಐಸಿಯುನಲ್ಲಿರುವ ಕಾಂಗ್ರೆಸ್ ಉಳಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಸುಳ್ಳು ಹೇಳಿದರೆ ಕಾಂಗ್ರೆಸ್ ಉಳಿಯಲು ಸಾಧ್ಯವಿಲ್ಲ ಎಂದರು.
ಗೋವಾ ತಂಟೆಗೆ ಅರ್ಥವಿಲ್ಲ:
ಮಹದಾಯಿ ವಿಚಾರದಲ್ಲಿ ಗೋವಾ ಸರ್ಕಾರ ಮೊದಲಿನಿಂದಲೂ ತಂಟೆ ಮಾಡಿಕೊಂಡು ಬಂದಿದೆ. ಬರೀ ವಿತಂಡವಾದ ಮಾಡಿ ಕಾಲ ಹರಣ ಮಾಡುವ ಪ್ರಯತ್ನ ಮಾಡುತ್ತದೆ. ಅದರಲ್ಲ ಯಾವತ್ತೂ ಅದು ಯಶಸ್ಸು ಕಾಣುವುದಿಲ್ಲ. ಯೋಜನೆ ಪ್ರಸ್ತಾಪವಾದಾಗ ಕರ್ನಾಟಕಕ್ಕೆ ನೀರೇ ಇಲ್ಲ. ನೀರಿನ ಹಕ್ಕು ಇಲ್ಲವೇ ಇಲ್ಲ ಎಂದು ವಾದಿಸಿತ್ತು. ಬಳಿಕ ಕರ್ನಾಟಕ ಹೋರಾಟ ನಡೆಸಿತು. ನೀರು ಅಲೋಕೇಶನ್ ಆಯಿತು. ಗೋವಾ ಸರ್ಕಾರದ ತಗಾದೆಗೆ ಅಷ್ಟು ಮಹತ್ವ ಕೊಡಬೇಕಿಲ್ಲ ಎಂದರು.