ಐತಿಹಾಸಿಕ ಶ್ರೀರಂಗಪಟ್ಟಣ ಜಂಬೂ ಸವಾರಿಗೆ ಚಾಲನೆ

Advertisement

ಮಂಡ್ಯ: ಐತಿಹಾಸಿಕ ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರೊಂದಿಗೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣಗೌಡ ಅವರು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯರವರು ಚಾಲನೆ ನೀಡಿದರು.
ಶ್ರೀರಂಗಪಟ್ಟಣದ ಕಿರಂಗೂರು ಸರ್ಕಲ್‌ನ ಬನ್ನಿಮಂಟಪದ ಬಳಿ ಗಜರಾಜ ಮಹೇಂದ್ರ ಮೇಲೆ ವಿರಾಜಮಾನಳಾದ ತಾಯಿ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಿದರು.
ಅಂಬಾರಿ ಹೊತ್ತ ಮಹೇಂದ್ರನ ಜೊತೆ ಕಾವೇರಿ ಮತ್ತು ವಿಜಯ ಕುಮ್ಕಿ ಆನೆಗಳಾಗಿ ಹೆಜ್ಜೆ ಹಾಕಿದವು. ವೀರಗಾಸೆ, ಡೊಳ್ಳುಕುಣಿತ, ಟಮಟೆ, ಸೋಮನ ಕುಣಿತ, ನವಿಲು ಕುಣಿತ ಸೇರಿದಂತೆ ಹತ್ತಾರು ಕಲಾ ತಂಡಗಳ ಪ್ರದರ್ಶನ ಮನಸೂರೆಗೊಳಿಸಿತು.
ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ, ಜಿಲ್ಲಾಧಿಕಾರಿ ಎಸ್ ಅಶ್ವಥಿ, ಎಸ್.ಪಿ. ಯತೀಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಜಂಬೂ ಸವಾರಿ